ನವದೆಹಲಿ: ಇಂದಿನಿಂದ ಲೋಕಸಭಾ ಮೊದಲ ಹಂತದ ಚುನಾವಣೆ ಶುರುವಾಗಿದ್ದು 102 ಸ್ಥಾನಗಳಿಗೆ ಮತದಾನ ನಡೆದಿದೆ.
ಇಂದು 21 ರಾಜ್ಯಗಳ 102 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು ಹಲವು ಗಣ್ಯರು ಮತದಾನದ ಮಾಡಿದರು.
ಸೂಪರ್ ಸ್ಟಾರ್ ಗಳಾದ ರಜಿನಿಕಾಂತ್,ಕಮಲ ಹಾಸನ್, ಈಶಾ ಪೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್, ಅಜಿತ್ ಕುಮಾರ್, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಕೇಂದ್ರ ಸಚಿವ ಗಡ್ಕರಿ, ಸಚಿವ ರಾಜವರ್ಧನ ರಾಥೋಡ್, ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್, ಮಣಿಪುರ ಸಚಿವ ಬಿರೇನ್ ಸಿಂಗ್ ಸೇರಿದಂತೆ ಹಲವರು ಮತದಾನ ಮಾಡಿದ್ದಾರೆ .
ತಮಿಳುನಾಡಿನ 39 ಲೋಕಸಭಾ ಸ್ಥಾನಗಳಿಗೂ ಮೊದಲ ಹಂತದಲ್ಲೇ ಮತದಾನ ನಡೆಯುತ್ತಿದ್ದು ಸೂಪರ್ ಸ್ಟಾರ್ ರಜಿನಿಕಾಂತ್, ಕಮಲ್ ಹಾಸನ್, ವಿಜಯ್ ಸೇತುಪತಿ ಹಾಗೂ ಧನುಷ್ ಸೇರಿದಂತೆ ಸ್ಟಾರ್ ನಟರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ , ನಟ ಧನುಷ್ ಅವರು ಚೆನ್ನೈನ ಟಿಟಿಕೆ ರಸ್ತೆಯ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಶಾಲೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

