ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹಲವೆಡೆ ಎನ್‍ಐಎ ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದೆ.
ಭಯೋತ್ಪಾದನಾ ಚಟುವಟಿಕೆ ಪ್ರಕರಣ ಸಂಬಂಧ ಎನ್‍ಐಎ ಬೆಳಿಗ್ಗೆ 9 ಕಡೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿತು.
2022ರಲ್ಲಿ ದಾಖಲಾಗಿದ್ದ ಪ್ರಕರಣದ ಸಂಬಂಧ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ ವ್ಯಕ್ತಿಗಳ ಹುಡುಕಾಟಕ್ಕಾಗಿ ಭದ್ರತಾ ಪಡೆಗಳ ನೆರವಿನೊಂದಿಗರ ಎನ್ ಐ ಎ ಈ ದಾಳಿ ನಡೆಸಿದೆ.
ಶ್ರೀನಗರದಲ್ಲಿ ನೆಲೆಸಿರುವ ಕೆಲವು ಶಂಕಿತರ ಬಗ್ಗೆ ಪಡೆದ ನಿರ್ದಿಷ್ಟ ಮಾಹಿತಿ ಮೇರೆಗೆ ಭಯೋತ್ಪಾದನಾ ನಿಗ್ರಹ ದಳವು ಹುಡುಕಾಟವನ್ನು ಆರಂಭಿಸಿದೆ.

