ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್

ನವದೆಹಲಿ: ಆಪ್‌ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಲ್‌ ಮೇಲೆ ದೌರ್ಜನ್ಯ ಎಸಗಿದ ದೆಹಲಿ ಸಿಎಂ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ನನ್ನು ಪೊಲೀಸರು ಬಂಧಿಸಿದ್ದಾರೆ.

ಮೇ 13 ರಂದು ಸಿಎಂ ನಿವಾಸದಲ್ಲಿ ತನ್ನ ಮೇಲೆ ಬಿಭವ್‌ ಕುಮಾರ್‌ ಹಲ್ಲೆ ನಡೆಸಿದ್ದಾರೆ ಎಂದು ಸ್ವಾತಿ ಮಲಿವಾಲ್‌ ದೂರು ನೀಡಿದ್ದರು.

ಸ್ವಾತಿ ಮಲಿವಾಲ್‌ ದೂರಿನ ಬೆನ್ನಲ್ಲೇ ವಿಧಿವಿಜ್ಞಾನ ತಜ್ಞರು, ಪೊಲೀಸರ ತಂಡ ಶುಕ್ರವಾರ ಸಂಜೆಯಿಂದ ಬೆಳಗಿನಜಾವದ ತನಕ ಮುಖ್ಯಮಂತ್ರಿ ಕೇಜ್ರಿವಾಲ್ ನಿವಾಸಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿತ್ತು.

ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಸಿಸಿಟಿವಿಯನ್ನು ಪೊಲೀಸರು ಸೀಲ್ ಮಾಡಿದ್ದಾರೆ. ತನಿಖೆಗೆ ತಾಂತ್ರಿಕ ಸಾಕ್ಷಿಯಾಗಿ ಪರಿಗಣನೆ ಮಾಡಲು ಡಿವಿಆರ್‌ ಸಹಿತ ದತ್ತಾಂಶವನ್ನು ದೆಹಲಿ ಪೊಲೀಸರು ಸೀಲ್ ಮಾಡಿದ್ದಾರೆ.