ಪಾಸ್‌ಪೋರ್ಟ್ ಕ್ಯಾನ್ಸಲ್ ಆಗೋದು ತಿಳಿದು ಪ್ರಜ್ವಲ್ ವಾಪಸ್: ಪರಮೇಶ್ವರ್

ಬೆಂಗಳೂರು: ಸಂಸದ‌ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದಾಗುತ್ತಿರುವುದರಿಂದ ವಾಪಸಾಗುತ್ತಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಟಾಂಗ್ ನೀಡಿದರು

ಪ್ರಜ್ವಲ್ ರೇವಣ್ಣ ಅವರ ಸಂಸದ ಸ್ಥಾನ ಅಂತ್ಯವಾಗಲಿದ್ದು, ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಕ್ಯಾನ್ಸಲ್ ಆಗಲಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಪ್ರಜ್ವಲ್ ರೇವಣ್ಣ ತನಿಖೆಗಾಗಿ ಎಸ್‌ಐಟಿ ಎಲ್ಲ ಪ್ರಯತ್ನ ಮಾಡುತ್ತಿದೆ, ವಾರೆಂಟ್ ಮೂಲಕ ಕೇಂದ್ರ ವಿದೇಶಾಂಗ ಇಲಾಖೆಗೆ ತಿಳಿಸಿದ್ದೇವೆ. ಬ್ಲೂ ಕಾರ್ನರ್ ನೋಟಿಸ್ ಕೊಟ್ಟಿದ್ದೂ ಗೊತ್ತಿದೆ. ಆದರೆ ಈಗ ಅವರ ಪಾಸ್‌ಪೋರ್ಟ್ ರದ್ದಾಗುವ ಹಿನ್ನೆಲೆಯಲ್ಲಿ ಎಲ್ಲವನ್ನೂ ತಿಳಿದು ವಾಪಸ್ ಬರುತ್ತೇನೆ ಅಂತಾ ವೀಡಿಯೋ ಮೂಲಕ ಪ್ರಜ್ವಲ್ ತಿಳಿಸಿದ್ದಾರೆ ಎಂದು ಟಾಂಗ್ ನೀಡಿದರು.

ಇದೇ ವೇಳೆ ಕಾಂಗ್ರೆಸ್ ಷಡ್ಯಂತ್ರ ಮಾಡಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅದೆನ್ನೆಲ್ಲಾ ನೋಡೋಣ, ಎಸ್‌ಐಟಿ ಅವರು ಗಮನಿಸುತ್ತಾರೆ ಎಂದು ತಿರುಗೇಟು ನೀಡಿದರು ಪರಮೇಶ್ವರ್.