ಮನೆ‌ ಹಿಂಬಾಗಿಲು ಮೀಟಿ ಹಣ,ಆಭರಣ ದೋಚಿದ ಕಳ್ಳರು

ಮೈಸೂರು: ಮನೆಯವರು ಮದುವೆಗೆ ಹೋಗಿದ್ದ ವೇಳೆ ಕಳ್ಳರು ಹಿಂಬಾಗಿಲು ಮೀಟಿ ಹಣ, ಆಭರಣ ದೋಚಿರುವ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಒಂದು ಲಕ್ಷ ರೂ ಹಾಗೂ 5.77 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಕೇರಳದಲ್ಲಿ ಸಂಭಂಧಿಕರ ಮದುವೆಗೆ ಹೋಗಿ ಹಿಂದಿರುಗಿದ ಕುಟುಂಬಕ್ಕೆ ಕಳ್ಳರು ಶಾಕ್ ನೀಡಿದ್ದಾರೆ.

ಮೈಸೂರಿನ ಸಾತಗಳ್ಳಿ ಬಡಾವಣೆಯಲ್ಲಿರುವ ಇಲಿಯಾಸ್ ಎಂಬುವರ ಮನೆಯಲ್ಲಿ ಘಟನೆ ನಡೆದಿದ್ದು,ಕೇರಳದಲ್ಲಿ ಸಂಭಂಧಿಕರ ಮದುವೆಗೆ ಇಡೀ ಕುಟುಂಬ ಮನೆಗೆ ಬೀಗ ಹಾಕಿ ತೆರಳಿತ್ತು.

ವಾಪಸು ಬಂದಾಗ ಕಳ್ಳರು ಮೊದಲ ಅಂತಸ್ತಿನ ಕೊಠಡಿಯ ವಾಗಿಲು ಮೀಟಿರುವುದು ಗೊತ್ತಾಗಿದೆ.

ವಾಹನ ಬಿಡಿಭಾಗಗಳ ವ್ಯಾಪಾರಿಯಾಗಿರುವ ಇಲಿಯಾಸ್ ಅವರು ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.