ಲಾಂಗ್ ನಿಂದ ಕೇಕ್ ಕಟ್ ಮಾಡಿ ಬರ್ತ್ ಡೇ ಆಚರಣೆ: ಯುವಕ ಜೈಲು

ಮೈಸೂರು: ಬರ್ತ್ ಡೇ ಸಂಭ್ರಮದ ಭರದಲ್ಲಿ ಲಾಂಗ್ ನಿಂದ ಕೇಕ್ ಕತ್ತರಿಸಿದ ಯುವಕ ಜೈಲು ಸೇರಿದ್ದಾನೆ.

ಗೌಸಿಯಾನಗರದ ತಬ್ರೇಜ್ ಬಂಧಿತ ಯುವಕ.

ಜನವರಿ 2 ರಂದು ತಬ್ರೇಜ್ ತನ್ನ ಸ್ನೇಹಿತರೊಂದಿಗೆ ಬರ್ತ್ ಡೇ ಆಚರಿಸಿದ‌ ವೇಳೆ ಲಾಂಗ್ ನಿಂದ ಕೇಕ್ ಕತ್ತರಿಸಿದ್ದಾನೆ.ಜತೆಗೆ ಈ ವಿಡಿಯೋವನ್ನ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹರಿಬಿಟ್ಟಿದ್ದ.

ಈ ಮಾಹಿತಿ ಅರಿತ ಉದಯಗಿರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದಾಗ ವಿಡಿಯೋ ಅಪ್ ಲೋಡ್ ಮಾಡಿರುವುದು ಗೊತ್ತಾಗಿದೆ.ಯಾವುದೇ ಪರವಾನಗಿ ಇಲ್ಲದೆ ಮಾರಕಾಸ್ತ್ರ ಹೊಂದಿರುವುದು ಅಪರಾಧ ಎಂದು ಪರಿಗಣಿಸಿದ ಉದಯಗಿರಿ ಪೊಲೀಸರು ತಬ್ರೇಜ್ ವಿರುದ್ದ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಉದಯಗಿರಿ ಠಾಣೆ ಸಿಬ್ಬಂದಿ ಸಂತೋಷ್ ಪವಾರ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ.