ಸಾಂಸ್ಕೃತಿಕ ನಗರಿಯಲ್ಲಿ ಘೋರ ದುರಂತ: ಒಂದೇ ಕುಟುಂಬದ 4 ಮಂದಿ ಸಾವು

ಮೈಸೂರು: ಸಾಂಸ್ಕೃತಿಕ ನಗರಿ
ಮೈಸೂರಿನಲ್ಲಿ ಘೋರ ದುರಂತ ನಡೆದಿದೆ.

ನಗರದ ವಿಶ್ವೇಶ್ವರ ನಗರದ ಅಪಾರ್ಟ್‌ಮೆಂಟ‌ನಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.

ಚೇತನ್ (45) ರೂಪಾಲಿ (43) ಪ್ರಿಯಂವಧ (62) ಕುಶಾಲ್ (15) ಸಾವನ್ನಪ್ಪಿದ ದುರ್ದೈವಿಗಳು.

ಚೇತನ್ ಅವರು ಮೊದಲು ಪತ್ನಿ, ತಾಯಿ,ಹಾಗೂ ಮಗನಿಗೆ ವಿಷ ನೀಡಿ ನಂತರ ತಾನು ನೇಣು ಬಿಗಿದುಕೊಂಡು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಕಮಿಷನರ್ ಸೀಮಾ ಲಾಟ್ಕರ್, ಡಿಸಿಪಿ ಜಾನ್ಹವಿ,ವಿದ್ಯಾರಣ್ಯಪುರಂ ಇನ್ಸ್ಪೆಕ್ಟರ್ ಮೋಹಿತ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.