ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲು ಭಾರತ-ಪಾಕ್‌ ಒಪ್ಪಂದ:ಆದರೂ ಕ್ಯಾತೆ ತೆಗೆದ ಪಾಕ್

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಸಂಜೆ 5 ಗಂಟೆಯಿಂದ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದರೂ ಮತ್ತೆ ಪಾಕ್‌ ಬಾಲ ಬಿಚ್ಚಿ ಕದನ ವಿರಾಮ ಉಲ್ಲಂಘಿಸಿದೆ.

ಸಂಜೆ‌ ಎರಡೂ ದೇಶಗಳು ಒಪ್ಪಂದ ಮಾಡಿಕೊಂಡಿವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಅವರು‌ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದರು.ಆದರೆ ಪಾಕಿಸ್ತಾನ ಶ್ರೀನಗರದಲ್ಲಿ ಡ್ರೋಣ್ ದಾಳಿ ನಡೆಸುತ್ತಿದೆ ನಿಯಮವನ್ನು ಉಲ್ಲಂಘಿಸಿ ಭಾರತವನ್ನು ಕೆಣಕಿದೆ.

ಶ್ರೀನಗರ,ಬಾರಾಮುಲ್ಲ,ರಜೌರಿ ಮತ್ತಿತರೆಡೆ ಗಡಿಯಲ್ಲಿ ಪಾಕ್ ಸೈನಿಕರು ಡ್ರೋಣ್ ದಾಳಿ ನಡೆಸಿದೆ ಎಂಬುದನ್ನು ಜಮ್ಮು ಕಾಶ್ಮೀರ ಮುಖ್ಯ ಮಂತ್ರಿ ಓಮರ್ ಅಬ್ದುಲ್ಲ ತಿಳಿಸಿದ್ದಾರೆ.

ಸಚಿವ ಜಯಶಂಕರ್ ಅವರು ಭಾರತವು ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ವಿರುದ್ಧ ದೃಢ ಮತ್ತು ರಾಜಿಯಾಗದ ನಿಲುವನ್ನು ಹೊಂದಿದೆ. ಅದು ಹಾಗೆಯೇ ಮುಂದುವರಿಯುತ್ತದೆ ಎಂದು ಪೋಸ್ಟ್ ನಲ್ಲಿ ತಿಳಿಸಿದ್ದರು.

ಭಾರತ ಮತ್ತು ಪಾಕ್‌ ತ್ವರಿತ ಶಾಂತಿ ಮಾತುಕತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಒತ್ತಾಯಿಸಿದ್ದರು. ಅಮೆರಿಕ ಮಧ್ಯಸ್ಥಿಕೆಯೊಂದಿಗೆ ಕೊನೆಗೂ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ.

ಉಭಯ ದೇಶಗಳ ನಡುವೆ ಕದನ ವಿರಾಮ ಒಪ್ಪಂದ ಆಗಿದೆ ಎಂದು ಡೊನಾಲ್ಡ್‌ ಟ್ರಂಪ್‌ ಕೂಡಾ ಎಕ್ಸ್‌ ಪೋಸ್ಟ್‌ ಮೂಲಕ ತಿಳಿಸಿದ್ದರು.

ಆದರೆ ಪಾಕ್ ನರಿಬುದ್ದಿ ಬಿಟ್ಟಿಲ್ಲ.ಮತ್ತೆ ಕ್ಯಾತೆ‌ ತೆಗೆದಿದೆ ಸಂಜೆಯಿಂದ ಒಂದೇ ಸಮ ದಾಳಿ ಮುಂದುವರಿಸಿದೆ.

ಭಾರತೀಯ ಸೇನೆ ಕೂಡಾ ಇದಕ್ಕೆ ಪ್ರತ್ಯುತ್ತರ ನೀಡುತ್ತಿದೆ.