ಮೋದಿ‌ ವಿರುದ್ಧ ಪ್ರಚೋದನಕಾರಿ‌ ಪೋಸ್ಟ್: ವ್ಯಕ್ತಿ ಜೈಲು ಪಾಲು

ಬೆಂಗಳೂರು: ಭಾರತ, ಪಾಕಿಸ್ತಾನ ಸಂಘರ್ಷದಲ್ಲಿ ಪ್ರಧಾನಿ ಮೋದಿ ಮನೆ ಮೇಲೆ ಯಾಕೆ ಬಾಂಬ್ ಬೀಳುತ್ತಿಲ್ಲ ಎಂದು ಹೇಳಿ ಪ್ರಚೋದನಾಕಾರಿ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಬಂಧಿತ ಆರೋಪಿ ಮಂಗನಮ್ಮನ ಪಾಳ್ಯ ನಿವಾಸಿ ನವಾಜ್ ಎಂದು ಮೂಲಗಳು ತಿಳಿಸಿವೆ.

ಪಬ್ಲಿಕ್ ಸರ್ವೆಂಟ್ ಎಂಬ ಐಡಿಯಲ್ಲಿ ಪ್ರಧಾನಿ ಮೋದಿ ಅವರ ವಿರುದ್ಧ ಪ್ರಚೋದನಾತ್ಮಕ ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ.

ವಿಡಿಯೋದಲ್ಲಿ ಭಾರತ, ಪಾಕಿಸ್ತಾನ ಸಂಘರ್ಷದ ವೇಳೆ ಸುಮ್ಮನೆ ಇರುವ ಜನರಿಗೆ ತೊಂದರೆಯಾಗುತ್ತದೆ. ಆದರೆ ಪ್ರಧಾನಿ ಮೋದಿ ಮನೆ ಮೇಲೆ ಯಾಕೆ ಬಾಂಬ್ ಬೀಳುತ್ತಿಲ್ಲ. ಮೊದಲು ಮೋದಿ ಮನೆ ಮೇಲೆ ಬಾಂಬ್ ಹಾಕಿ ಎಂದು ಹೇಳಿ ವಿಡಿಯೋ ವೈರಲ್ ಮಾಡಿದ್ದ.

ಬಂಡೆ ಪಾಳ್ಯ ಪೊಲೀಸರು ವಿಡಿಯೋ ಆಧರಿಸಿ ಆರೋಪಿ ವಿರುದ್ಧ ದೂರು ದಾಖಲಿಸಿಕೊಂಡಿದ್ದರು.ಈಗ ಆತನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಿದ್ದಾರೆ.