ಅಪ್ರಾಪ್ತೆಯ ಪುಸಲಾಯಿಸಿ ಕರೆ ತಂದು ಅತ್ಯಾ*ಚಾರ-ಯುವಕ ಅರೆಸ್ಟ್

(ವರದಿ: ಸಿದ್ದರಾಜು, ಕೊಳ್ಳೇಗಾಲ)

ಕೊಳ್ಳೆಗಾಲ: ಅಪ್ರಾಪ್ತೆಯನ್ನು ಪುಸಲಾಯಿಸಿ ಕರೆ ತಂದು ತಾಲ್ಲೂಕಿನ ಕುರಬನಕಟ್ಟೆಯ ಬಳಿ ಅತ್ಯಾಚಾರ ಎಸಗಿದ್ದ ಆರೋಪಿಯನ್ನ ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಕೊಳ್ಳೆಗಾಲ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಕುಣಗಳ್ಳಿ ಗ್ರಾಮದ ಕೃಷ್ಣ ಅಲಿಯಾಸ್ ಡಿಚ್ಚಿ ಕೃಷ್ಣ ಎಂಬಾತ ಬಂಧಿತ ಆರೋಪಿ.

ಮಂಡ್ಯ ಜಿಲ್ಲೆ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುದರಗುಂಡಿ ಗ್ರಾಮದ 10 ನೇ ತರಗತಿ ಓದುತಿದ್ದ ಅಪ್ರಾಪ್ತ ವಿಧ್ಯಾರ್ಥಿನಿಯ ಮೊಬೈಲ್ ನಂಬರ್ ಪಡೆದಿದ್ದ ಕೃಷ್ಣ ಅಲಿಯಾಸ್ ಡಿಚ್ಚಿ, ಆಕೆ ವಾಟ್ಸಾಪ್ ನಂಬ‌ರ್ ಗೆ ಹಾಯ್ ಎಂದು ಸಂದೇಶ ಕಳುಹಿಸಿ ಬಲೆಗೆ ಬೀಳಿಸಿಕೊಂಡಿದ್ದ.

ನಂತರ ನಿರಂತರ ಸಂಪರ್ಕದಲ್ಲಿದ್ದು ಆಕೆಯನ್ನು ಕೊಳ್ಳೆಗಾಲದ ಕುರುಬನ ಕಟ್ಟೆಗೆ ದೇವರ ದರ್ಶನಕ್ಕೆಂದು ಕರೆದುಕೊಂಡು ಬಂದು ಆಕೆಯ ಒಪ್ಪಿಗೆ ಇಲ್ಲದೆ ಅತ್ಯಾಚಾರ ನಡೆಸಲು ಮುಂದಾಗಿದ್ದಾನೆ.

ಆಕೆ ಒಪ್ಪದಿದ್ದಾಗ‌ ಏನೇನೊ ಹೇಳಿ ನಂಬಿಸಿ ಆಕೆಯನ್ನು 18-3-25 ರಿಂದ 25-4-25 ರ ತನಕ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ

ವಿಧ್ಯಾರ್ಥಿನಿಗೆ ಆರೋಗ್ಯದಲ್ಲಿ ಏರು ಪೇರಾದ ಕಾರಣ ಮದ್ದೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಬಂದಾಗ ಆಕೆ 3 ತಿಂಗಳ ಗರ್ಭಿಣಿಯಾಗಿರುವುದು ಗೊತ್ತಾಗಿದೆ.

ಈ ಬಗ್ಗೆ ಆಸ್ಪತ್ರೆಯ ವೈದ್ಯರು ಸ್ಥಳಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಮಾಹಿತಿ ನೀಡಿದ್ದರು.

ನಂತರ ಇಲಾಖೆಯ ಅಧಿಕಾರಿಗಳು ಅಪ್ರಾಪ್ತೆಯನ್ನು ಕೌನ್ಸಿಲಿಂಗ್‌ ನಡೆಸಿ ನಡೆದಿರುವ ಘಟನೆ ಬಗ್ಗೆ ಸಂತ್ರಸ್ತೆಯಿಂದ ಹೇಳಿಕೆ ಪಡೆದು ನೆನ್ನೆ ಅಂದರೆ‌ ಜೂ.12 ರಂದು ಗುರುವಾರ ಮದ್ದೂರು ಪೊಲೀಸ್‌ ಠಾಣೆಗೆ ಅಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯ ಮೇಲ್ವಿಚಾರಕಿ ಆಸ್ಮಭಾನು ಎಂಬುವವರು ನೀಡಿದ್ದಾರೆ.

ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಮದ್ದೂರು ಠಾಣೆ ಪೊಲೀಸರು ನಂತರ ಪ್ರಕರಣವನ್ನು ಕೊಳ್ಳೆಗಾಲ ಗ್ರಾಮಾಂತರ ಪೊಲೀಸ್‌ ಠಾಣೆಗೆ ವರ್ಗಾಯಿಸಿದ್ದಾರೆ.

ಪ್ರಕರಣದ ಬೆನ್ನತ್ತಿದ ಕೊಳ್ಳೆಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ ಐ ಸುಪ್ರೀತ್ ಮತ್ತು ತಂಡ ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಕೊಡಗಿನ ಸೋಮವಾರಪೇಟೆಯಲ್ಲಿ ಅವಿತುಕೊಂಡಿದ್ದ ಕೃಷ್ಣ @ ಡಿಚ್ಚಿಯನ್ನು ಬಂಧಿಸಿದ್ದಾರೆ‌

ಈ ಅತ್ಯಾಚಾರಿ ಯುವಕನ ಪತ್ತೆಗಾಗಿ ರಾತ್ರೋ ರಾತ್ರಿ ಅಂದರೆ ರಾತ್ರಿ 10 ರಲ್ಲಿ ಪ್ರಾರಂಭವಾದ ಕಾರ್ಯಾಚರಣೆ ಮುಂಜಾನೆ 4 ರವರೆಗೆ ನಡೆಸಿದ್ದಾರೆ.

ಮೂಲತಃ ಕುಣಗಳ್ಳಿ ಗ್ರಾಮದ ಡಿಚ್ಚಿ ಕೃಷ್ಣನ ಕುಟುಂಬ ಕೊಡಗಿನ ಸೋಮವಾರ ಪೇಟೆಯ ಕಾಫಿ ತೋಟದಲ್ಲಿ ಕೂಲಿ ಕೆಲಸದಲ್ಲಿ ತೊಡಗಿಕೊಂಡಿದೆ.

ಆತನ ಕುಟುಂಬ ವಾಸಮಾಡುತ್ತಿದ್ದ ಎರಡು ಮನೆಗಳಲ್ಲೂ ಪಿಎಸ್ ಐ ಸುಪ್ರೀತ್ ಮತ್ತು ತಂಡ ಶೋಧನೆ ನಡೆಸಿ ಇಂದು ಮುಂಜಾನೆ 4 ಗಂಟೆಯಲ್ಲಿ ಒಂದು ಮನೆಯಲ್ಲಿ ಡಿಚ್ಚಿ ಕೃಷ್ಣನನ್ನು ಪತ್ತೆ ಮಾಡಿ ಹೆಡೆಮುರಿಕಟ್ಟಿ ಕೊಳ್ಳೆಗಾಲಕ್ಕೆ ಕರೆತಂದಿದ್ದಾರೆ.