(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಮನಿಡಬ್ಲಿಂಗ್ ಪ್ರಕರಣದಲ್ಲಿ ನಾಲ್ವರು ಪೊಲೀಸರು ಭಾಗಿಯಾಗಿರುವುದು ಕಂಡುಬಂದ ಹಿನ್ನಲೆಯಲ್ಲಿ ಚಾಮರಾಜನಗರ ಎಸ್ಪಿ ಬಿ.ಟಿ.ಕವಿತಾ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಒಂದಾದ ಮನಿ ಡಬ್ಲಿಂಗ್ ಪ್ರಕ್ರಿಯೆ ಕೆಲ ಪೊಲೀಸರ ಬೆಂಗಾವಲಿನಲ್ಲಿ ನಡೆಯುತ್ತಿದೆ ಎಂಬ ಆರೋಪಕ್ಕೆ ದಾಖಲಾದ ಪ್ರಕರಣ ಪುಷ್ಟೀಕರಿಸಿತ್ರು.
ಸಚ್ಚಿದಾನಂದ ಎಂಬುವರ ದೂರಿನ ಮೇರೆಗೆ ತನಿಖೆ ನಡೆಸಿ ಎಸ್ ಪಿ ಈ ಕ್ರಮಕೈಗೊಂಡಿದ್ದಾರೆ.
ಸೆನ್ ಠಾಣೆಯ ಹಾಗೂ ಪಟ್ಟಣ ಠಾಣೆಯ ಪ್ರಭಾರ ಪಿಎಸ್ಐ ಅಯ್ಯನಗೌಡ, ಸಿಬ್ಬಂದಿಗಳಾದ ಮಹೇಶ, ಮೋಹನ, ಪಟ್ಟಣ ಠಾಣೆಯ ಬಸವಣ್ಣ ಎಂಬುವವರು ಅವರ ಜೊತೆ ಹೋಗಿದ್ದರೆಂಬ ಖಚಿತ ಮಾಹಿತಿ ಮೇರೆಗೆ ಅಮಾನತ್ತಿನ ಆದೇಶ ಹೊರಡಿಸಿದ್ದಾರೆ.
ಸಿಬ್ಬಂದಿಗಳು ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಬೇಕಾದವರು ಪ್ರೋತ್ಸಾಹಿಸಿದರೆ ಅವರ ಮೇಲೆ ಮುಲಾಜಿಲ್ಲದೆ ಕ್ರಮವಹಿಸುತ್ತೇವೆ ಎಂದು ಬಿ.ಟಿ. ಕವಿತಾ ಹೇಳಿದ್ದರು. ಅದರಂತೆ ನಡೆದುಕೊಂಡು ಪೊಲೀಸರನ್ನು ಅಮಾನತು ಮಾಡಿ ದಕ್ಷತೆ ತೋರಿದ್ದಾರೆ.

