ಬಾಲಕಿ ಹತ್ಯೆ: ಅತ್ಯಾಚಾರ ಶಂಕೆ

ಮೈಸೂರು: ಮೈಸೂರಿನ ವಸ್ತುಪ್ರದರ್ಶನ ಸಮೀಪ ಕಳೆದ ಎರಡು ದಿನಗಳ ಹಿಂದೆಯಷ್ಟೇ ರೌಡಿ ಶೀಟರ್ ಹತ್ಯೆ ಮಾಸುವ ಮುನ್ನವೇ ಬಾಲಕಿಯ ಕೊಲೆಯಾಗಿದ್ದು ನಗರದ ಜನತೆ‌ ಆತಂಕಕ್ಕೆ ಒಳಗಾಗಿದ್ದಾರೆ.

ವಸ್ತುಪ್ರದರ್ಶನ ಮೈದಾನ ಸಮೀಪ ಬಾಲಕಿಯ ಶವ ಗುರುವಾರ ಮುಂಜಾನೆ ಪತ್ತೆಯಾಗಿದ್ದು ಬಲೂನ್ ಮಾರಾಟ ಮಾಡುವ ಹುಡುಗಿ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ದಿನಗಳ ಹಿಂದೆ ಇದೇ ಸ್ಥಳದಲ್ಲಿ ಕೊಲೆ ನಡೆದಿತ್ತು, ಹಾಡಹಗಲೇ ಲಾಂಗ್ ಗಳು ಝಳಪಿಸಿದ್ದವು ಇದರಿಂದಲೇ ಸಾಂಸ್ಕೃತಿಕ ಜನ ಹೊರಬಂದಿಲ್ಲ.ಇದೀಗ‌‌ ಮತ್ತೊಂದು ಕೊಲೆಯಾಗಿದೆ.

ಸುಮಾರು 13 ವರ್ಷದ ಬಾಲಕಿ ದೇಹ ಮೈ ಮೇಲೆ ಬಟ್ಟೆ ಇಲ್ಲದೆ ಪತ್ತೆಯಾಗಿದ್ದು‌ ಅತ್ಯಾಚಾರ ಆಗಿರಬಹುದು ಎಂದು ಹೇಳಲಾಗುತ್ತಿದ್ದು,ಮರಣೋತ್ತರ ಪರೀಕ್ಷಾ ವರದಿ ಬಂದ ನಂತರ ಸತ್ಯಾಸತ್ಯತೆ ತಿಳಿಯಲಿದೆ.

ದಸರಾ ಸಂದರ್ಭದಲ್ಲಿ ಕಲಬುರಗಿ ಕಡೆಯಿಂದ ಬಲೂನ್ ಮತ್ತಿತರ‌ ವಸ್ತುಗಳನ್ನು ಮಾರಾಟ ಮಾಡುವ ಸುಮಾರು ಕುಟುಂಬಗಳು ಮೈಸೂರಿಗೆ ಬಂದು ವಸ್ತು ಪ್ರದರ್ಶನ ಮೈದಾನದ ಸಮೀಪ ಟೆಂಟ್ ಹಾಕಿಕೊಂಡು ನಗರದಲ್ಲಿ ವ್ಯಾಪಾರ ಮಾಡಿ ಬದುಕು ಸಾಗಿಸುತ್ತಿದ್ದರು.

ರಾತ್ರಿ ತಂದೆ,ತಾಯಿಯೊಂದಿಗೆ ಬಾಲಕಿ ಮಲಗಿದ್ದಳು.ಮುಂಜಾನೆ ಎದ್ದು ನೋಡಿದಾಗ ಆಕೆ‌ ಕಾಣಿಸಿಲ್ಲ.

ಎಲ್ಲಾ ಕಡೆ ಹುಡುಕಿದಾಗ ಟೆಂಟ್‌ ಸಮೀಪ ಹಿಂಬದಿ ಬಾಲಕಿಯ ಮೃತ ದೇಹ ಪತ್ತೆಯಾಗಿದ್ದು,ಮೈ ಮೇಲೆ ಬಟ್ಟೆ ಇಲ್ಲದ ಕಾರಣ‌‌ ಅತ್ಯಾಚಾರ‌ ಶಂಕೆ ವ್ಯಕ್ತವಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು‌ ದೌಢಾಯಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.