ಧಾರಾಕಾರ ಮಳೆಗೆ ವಿಧ್ಯಾರ್ಥಿ ನಿಲಯಕ್ಕೆ ನುಗ್ಗಿದ ಚರಂಡಿ ನೀರು!

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಚರಂಡಿ ನೀರು ಉಕ್ಕಿ ವಿಧ್ಯಾರ್ಥಿನಿಲಯಕ್ಕೆ ನುಗ್ಗಿದ್ದು ವಿದ್ಯಾರ್ಥಿಗಳು ಇಡೀ ರಾತ್ರಿ ಪಡಿಪಾಟಲು ಪಟ್ಟರು.

ಶ್ರೀರಂಗಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ ನೀರಿನಿಂದ ಜಲಾವೃತವಾಗಿದೆ.

ಜಲಾವೃತವಾದುದರಿಂದ ಕೊಠಡಿಗಳಿಂದ ಹೊರ ಬರಲಾಗದೆ ವಿಧ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸಿದ್ದಾರೆ.

ಚರಂಡಿ ನೀರು ಜಲಾವೃತವಾಗಿ ಸ್ಥಳದಲ್ಲಿ ಗಬ್ಬೆದ್ದು ನಾರುತ್ತಿದೆ.,ಕಳಪೆ ಕಾಮಗಾರಿ, ಅವೈಜ್ಞಾನಿಕ ಚರಂಡಿ ವ್ಯವಸ್ಥೆಗೆ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾತ್ರಿ ವಸತಿ ನಿಲಯದ ಕೊಠಡಿಗಳಿಗೆ ನೀರು ನುಗ್ಗಿ ಮಲಗಲು ಸಾಧ್ಯವಾಗದೆ ವಿದ್ಯಾರ್ಥಿಗಳು ತೀವ್ರ ತೊಂದರೆ ಪಟ್ಡಿದ್ದು,ತಕ್ಷಣ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.