ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಸಾರ್ ಯಾಕಿಷ್ಟು ದುಬಾರಿ ಡಿಪಿಆರ್ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯ ಹಾಗೂ ಕಾರವಾಗಿ ಚಾಟಿ ಬೀಸಿದ್ದಾರೆ.
2.2 ಕಿ.ಮೀ. ಟನಲ್ ರಸ್ತೆಗೆ 1,385 ಕೋಟಿ ಡಿಪಿಆರ್. ಉಪ ಮುಖ್ಯ ಮಂತ್ರಿಗಳೆ
ತಾವು ಮಾಡಿಸುವ ಡಿಪಿಆರ್ ಗಳು ಚಿನ್ನದ ಕಾಗದದ ಮೇಲೆ ಬರೆಯಲಾಗುತ್ತೋ ಅಥವಾ ಚಿನ್ನದ ಶಾಹಿಯಿಂದ ಮುದ್ರಣ ಆಗುತ್ತೋ ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ಇನ್ನೆಷ್ಟು ಲೂಟಿ ಹೊಡೆಯುತ್ತೀರಿ ಸ್ವಾಮಿ. ಕನ್ನಡಿಗರನ್ನು ಲೂಟಿ ಹೊಡೆಯಲು ಇನ್ನೆಷ್ಟು ಹಗಲು ದರೋಡೆ ಯೋಜನೆಗಳನ್ನು ರೂಪಿಸುತ್ತೀರಿ.
ಟನಲ್ ರೋಡು ಬೇಡ ಯಾವುದೂ ಬೇಡ, ಮೊದಲು ಈಗಿರುವ ರಸ್ತೆಗಳನ್ನು ರಿಪೇರಿ ಮಾಡಿಸಿ, ಸರಿಯಾಗಿ ನಿರ್ಹವಣೆ ಮಾಡಿ, ಮೆಟ್ರೋ ಕಾಮಗಾರಿ ಚುರುಕುಗೊಳಿಸಿ ಸಧ್ಯಕ್ಕೆ ಅಷ್ಟು ಸಾಕು ಎಂದು ಅಶೋಕ್ ಸಲಹೆ ನೀಡಿದ್ದಾರೆ.

