ಲ್ಯಾಂಡ್ ಲಾರ್ಡ್ ಯಶಸ್ಸಿಗೆ‌ ಕೇರಳದ ರಾಜರಾಜೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ

ಕೇರಳ: ದುನಿಯಾ ವಿಜಯ್, ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ದುನಿಯಾ ವಿಜಯ್ ಪುತ್ರಿ ರಿತನ್ಯಾ ವಿಜಯ್ ಅವರ ನಟನೆಯ ಬಹು ನಿರೀಕ್ಷಿತ ಲ್ಯಾಂಡ್ ಲಾರ್ಡ್ ಚಲನಚಿತ್ರ ಶತ ದಿನೋತ್ಸವ ಆಚರಿಸಲೆಂದು ವಿಶೇಷ ಪೂಜೆ ಮಾಡಿಸಲಾಯಿತು.

ಲ್ಯಾಂಡ್ ಲಾರ್ಡ್ ಚಲನಚಿತ್ರದ ನಿರ್ದೇಶಕ ಜಡೇಶ್ ಹಂಪಿ ಅವರು 1980 ಸಾಲಿನ ನೈಜ್ಯ ಘಟನೆ ಆದರಿಸಿ ತೆಗೆದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ 2026 ಸಾಲಿನ ಬಹು ನಿರೀಕ್ಷಿತ ಚಿತ್ರವಾಗಿದೆ.

ಲ್ಯಾಂಡ್ ಲಾರ್ಡ್ ಚಿತ್ರವು ಜನವರಿ 23 ರಂದು ರಾಜ್ಯಾದ್ಯಂತ ಪ್ರದರ್ಶನ ಗೊಳ್ಳುತ್ತಿರುವುದರಿಂದ ಈ ಚಿತ್ರವು ಶತ ದಿನೋತ್ಸವ ಆಚರಿಸಲೆಂದು ಕೇರಳದ ರಾಜರಾಜೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸಲಾಯಿತು.

ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ರಿಷಿ ವಿಶ್ವಕರ್ಮ,ರೇಡಿಯೋ ಜಾಕಿ ಸುನೀಲ್, ಯುವ ಭಾರತ್ ಸಂಘಟನೆಯ ಸಂಚಾಲಕ ಜೋಗಿ ಮಂಜು,ಯುವ ಮುಖಂಡ ರಾಕೇಶ್ ಗೌಡ,ಪ್ರಸನ್ನ ಕಲ್ಯಾಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ್ ಮುಂತಾದವರು ಪೂಜೆಯಲ್ಲಿ ಹಾಜರಿದ್ದರು.