ಫಾರ್ಮ್ ಹೌಸ್ ನಲ್ಲಿ ದರ್ಶನ್ ಪತ್ನಿ ಸಂಕ್ರಾಂತಿ ಆಚರಣೆ

ಮೈಸೂರು: ನಟ ದರ್ಶನ್‌ ಇಲ್ಲದಿದ್ದರೂ ಅವರ ಕುಟುಂಬ ಪ್ರತಿ ವರ್ಷದಂತೆ ಈ ಬಾರಿ ಕೂಡ ಮಕರ ಸಂಕ್ರಾಂತಿಯನ್ನು ತಮ್ಮ ಫಾರ್ಮ್‌ ಹೌಸ್‌ನಲ್ಲಿ ಸಂಭ್ರಮದಿಂದ ಆಚರಿಸಿತು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲಿನಲ್ಲಿರುವುದರಿಂದ ಅವರ ಪತ್ನಿ ವಿಜಯಲಕ್ಷ್ಮಿ ಸಂಕ್ರಾಂತಿಯನ್ನು ಆಚರಣೆ ಮಾಡಿದ್ದಾರೆ.ಇದೀಗ ಈ ಫೋಟೊ ಹಾಗು ವಿಡಿಯೊವನ್ನು ಸಾಮಾಜಿಕ ಜಾಲಾತಾಣದಲ್ಲಿ ಅವರು ಹಂಚಿಕೊಂಡಿದ್ದಾರೆ.

ದರ್ಶನ್‌ ತಮ್ಮ ಫಾರ್ಮ್‌ಹೌಸ್‌ದಲ್ಲಿ ಕುದುರೆಯನ್ನು ಸಾಕಿದ್ದಾರೆ. ದರ್ಶನ್‌ ಅನುಪಸ್ಥಿತಿಯಲ್ಲಿ ವಿಜಯಲಕ್ಷ್ಮಿ ಅವರು ಎತ್ತುಗಳು ಮತ್ತು ಕುದುರೆಗೆ ಪೂಜೆ ಸಲ್ಲಿಸಿದ ಫೋಟೊವನ್ನು ಹಂಚಿಕೊಂಡಿದ್ದಾರೆ.

ದರ್ಶನ್ ಅವರ ಪ್ರೀತಿಯ ಕುದುರೆಯನ್ನು ಮುದ್ದು ಮಾಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊಗೆ ಅಭಿಮಾನಿಗಳು ಖುಷಿಯಿಂದ ಕಾಮೆಂಟ್‌ ಮಾಡಿದ್ದಾರೆ.

ಕೆಲವರು ಭಾವುಕರಾಗಿ ಕಾಮೆಂಟ್‌ಗಳನ್ನು ಹಾಕಿ, ವಿಜಯಲಕ್ಷ್ಮಿ ಅವರಿಗೆ ಧೈರ್ಯ ತುಂಬುತ್ತಿದ್ದಾರೆ.