ಸ್ಟಾರ್ ಗೋಲ್ಡ್ ಕಂಪನಿ ಮಾಲೀಕನ ಬಂಧಿಸಿದ ವಿಜಯನಗರ ಪೊಲೀಸರು

ಮೈಸೂರು: ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ನಂಬಿಸಿ ಚಿನ್ನ ಗಿರವಿ ಇಟ್ಟುಕೊಂಡು ರಾತ್ರೋ ರಾತ್ರಿ ಎಸ್ಕೇಪ್ ಆಗಿದ್ದ ಸ್ಟಾರ್ ಗೋಲ್ಡ್ ಕಂಪನಿ ಮಾಲೀಕನನ್ನು ವಿಜಯನಗರ ಠಾಣೆ ಪೊಲೀಸರು ಬಂದಿಸಿದ್ದಾರೆ.

ಆರೋಪಿ ಯೋಗೇಶ್ ವಿಜಯನಗರ 2ನೇ ಹಂತ ತ್ರಿನೇತ್ರ ಸರ್ಕಲ್ ಬಳಿ ಸ್ಟಾರ್ ಗೋಲ್ಡ್ ಕಂಪನಿ ತೆರೆದು ಅತೀ ಕಡಿಮೆ ಬಡ್ಡಿ ದರದಲ್ಲಿ ಚಿನ್ನ ದ ಮೇಲೆ ಅತೀ ಹೆಚ್ಚು ಸಾಲ ಕೊಡುವುದಾಗಿ ಗ್ರಾಹಕ ರನ್ನು ನಂಬಿಸಿ ಅವರು ಅಡಮಾನ ಇರಿಸಿದ ಚಿನ್ನ ವನ್ನು ಅಕ್ರಮವಾಗಿ ತನ್ನ ಲಾಭಕ್ಕಾಗಿ ಗ್ರಾಹಕ ರ ಗಮನಕ್ಕೆ ತರದೇ ಕರಗಿಸಿ ಒಳಗೊಳಗೇ ಮಾರಾಟ ಮಾಡಿ ಸುಮಾರು 15 ಜನರಿಗೆ ಮೋಸ ಮಾಡಿ 850 ಗ್ರಾಂ ಚಿನ್ನ ಗುಳುಂ ಮಾಡಿ ಸುಮಾರು 1.5 ಕೋಟಿ ಹಣ ದುರ್ಲಾಭ ಮಾಡಿ ಕೊಂಡು ತಲೆ ಮರೆಸಿಕೊಂಡಿದ್ದ.

ಪ್ರಕರಣ ದಾಖಲಾಗಿ ಎರಡೂವರೇ ತಿಂಗಳ ನಂತರ ಆರೋಪಿಯನ್ನ ಪತ್ತೆ ಹಚ್ಚಿ ಬಂಧಿಸಿರುವ ಪೊಲೀಸರು ನ್ಯಾಯಾಲಯ ಕ್ಕೆ ಹಾಜರುಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಅದೇಶಿಸಲಾಗಿದೆ.

2025 ರ ನವೆಂಬರ್ ನಲ್ಲಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಂಚನೆ,ನಂಬಿಕೆ ದ್ರೋಹ ಸೇರಿದಂತೆ ಹಲವು ಕೇಸುಗಳು ದಾಖಲಾಗಿದ್ದು ತನಿಖೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರೂ ಕೂಡಾ ಹಾಜರಾಗದೆ ಸ್ಟಾರ್ ಗೋಲ್ಡ್ ಮಾಲೀಕ ತಲೆ ಮರೆಸಿಕೊಂಡಿದ್ದ.ಈಗ ಕಂಬಿ ಎಣಿಸುವಂತಾಗಿದೆ.

ಚಿನ್ನದ ಬೆಲೆ ಗಗನಕ್ಕೆ ಏರಿರಿರುವ ಸಂದರ್ಭದಲ್ಲಿ ಸಾರ್ವಜನಿಕರು ಇಂತಹ ವಂಚನೆ ಗಳ ಬಗ್ಗೆ ಅತ್ಯಂತ ಎಚ್ಚರಿಕೆ ಯಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ.