ಗಾಜಿಯಾಬಾದ್: ಆನ್ಲೈನ್ ಗೇಮ್ ಆಡಬೇಡಿ ಎಂದು ಬುದ್ಧಿ ಹೇಳಿದ್ದಕ್ಕೆ ಮೂರು ಅಕ್ಕ ತಂಗಿಯರು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ ಹೇಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಆನ್‌ಲೈನ್ ಗೇಮಿಂಗ್ ವ್ಯಸನಕ್ಕೆ ಬಿದ್ದಿದ್ದ ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಪಖಿ (12), ಪ್ರಾಚಿ (14) ಮತ್ತು ವಿಶಿಕಾ (16) ಆತ್ಮಹತ್ಯೆ ಮಾಡಿಕೊಂಡ ಬಾಲಕಿಯರು.
ಗಾಜಿಯಾಬಾದ್‌ನ ವಸತಿ ಪಟ್ಟಣವಾದ ಭಾರತ್ ಸಿಟಿಯಲ್ಲಿ ಬುಧವಾರ ಮುಂಜಾನೆ ಮೂವರು ಅಕ್ಕ ತಂಗಿಯರು 9 ನೆ ಮಹಡಿಯಿಂದ ಹಾರಿ ಮೃತಪಟ್ಟಿದ್ದಾರೆ.
ಮಕ್ಕಳಿಗೆ ಆನ್‌ಲೈನ್ ಗೇಮ್ ಆಡಬೇಡಿ ಒಳ್ಳೆಯದಲ್ಲ ಎಂದು ಬೈದು ಬುದ್ದಿ ಹೇಳಿದ್ದಕ್ಕೆ ಮೂವರು ಸಹೋದರಿಯರು ಅಪಾರ್ಟ್‌ಮೆಂಟ್ ಕಟ್ಟಡದ ಒಂಬತ್ತನೇ ಮಹಡಿಯಿಂದ ಹಾರಿದ್ದಾರೆ.
ಈ ಸಹೋದರಿಯರು ಸ್ನಾನ, ತಿನ್ನುವುದು, ಶಾಲೆಗೆ ಹೋಗುವುದು, ಮಲಗುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ಒಟ್ಟಿಗೆ ಮಾಡುತ್ತಿದ್ದರು.
ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಪಾಠ ಪ್ರವಚನಕ್ಕಾಗಿ ಅವರ ಕೈಗೆ ಮೊಬೈಲ್ ನೀಡಲಾಗಿತ್ತು.ಆದರೆ ಬಾಲಕಿಯರು ಆನ್‌ಲೈನ್ ಆಟಗಳ ಗೀಳಿಗೆ ಬಿದ್ದರು. ಅದರಲ್ಲೂ ಆನ್‌ಲೈನ್ ಟಾಸ್ಕ್ ಆಧಾರಿತ ಕೊರಿಯನ್ ಲವ್ ಗೇಮ್ ಹೆಚ್ಚು ಆಡುತ್ತಿದ್ದರು.
ಇದರಿಂದಾಗಿ ಬಾಲಕಿಯರು ಶಾಲೆಗೂ ಸರಿಯಾಗಿ ಹೋಗುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

