ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸತತ ಒಂಬತ್ತನೇ ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಮಂಡಿಸಿದರು.
ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಮಹಿಳೆಯರಿಗೆ ಸಚಿವೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಬೆಂಗಳೂರಿಗೆ ಅವರು ಬಂಪರ್ ಕೊಡುಗೆ ಕೊಟ್ಟಿದ್ದಾರೆ. 7 ಹೈಸ್ಪೀಡ್ ರೈಲು ಕಾರಿಡಾರ್ ಘೋಷಣೆ ಮಾಡಲಾಗಿದ್ದು, ಬೆಂಗಳೂರಿಗೆ ಬುಲೆಟ್ ರೈಲು ಘೋಷಿಸಿರುವುದು ವಿಶೇಷ.
ಟೈಯರ್ -2 ಮತ್ತು ಟೈಯರ್ -3 ನಗರಗಳನ್ನು ಪ್ರಮುಖ ನಗರ ಕೇಂದ್ರಗಳೊಂದಿಗೆ ಸಂಪರ್ಕಿಸುವ, ರಸ್ತೆ ಮತ್ತು ಅಲ್ಪಾವಧಿಯ ವಿಮಾನ ಪ್ರಯಾಣಕ್ಕೆ ವೇಗದ ಪರ್ಯಾಯವಾಗಿ ರೈಲ್ವೆಗಳನ್ನು ಮರುಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ.
ಪುಣೆ-ಮುಂಬೈ
ಪುಣೆ-ಹೈದರಾಬಾದ್
ಹೈದರಾಬಾದ್-ಬೆಂಗಳೂರು
ಬೆಂಗಳೂರು-ಚೆನ್ನೈ
ಹೈದರಾಬಾದ್-ಚೆನ್ನೈ
ದೆಹಲಿ- ವಾರಣಾಸಿ
ವಾರಣಾಸಿ-ಸಿಲಿಗುರಿ ಗೆ ಹೈ ಸ್ಪೀಡ್ ರೈಲು ಓಡಲಿದೆ.
ಏಪ್ರಿಲ್ 2026 ರಿಂದ ಹೊಸ ಐಟಿ ಕಾಯ್ದೆ ಅನ್ವಯ ಆದಾಯ ತೆರಿಗೆ ಸಲ್ಲಿಕೆ ವ್ಯವಸ್ಥೆಯನ್ನ ಸರಳಗೊಳಿಸಲಾಗುವುದು ಅಲ್ಲದೆ ಪರಿಷ್ಕೃತ ಆದಾಯ ತೆರಿಗೆ ಸಲ್ಲಿಸುವ ಕೊನೆಯ ದಿನಾಂಕವನ್ನ ಮಾರ್ಚ್ 31 ರ ವರೆಗೆ ವಿಸ್ತರಣೆ ಮಾಡುವುದಾಗಿ ಸಚಿವರು ಘೋಷಿಸಿದ್ದಾರೆ.
ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ. ಆದರೆ ಆದಾಯ ತೆರಿಗೆ ಪದ್ದತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದ ವರ್ಷ ಜಾರಿಯಾಗಿರುವ ಹಳೆ ಪದ್ದತಿಯೇಮುಂದುವರಿಯಲಿದೆ.
ವಿದೇಶಿ ಪ್ರಯಾಣ ಕೈಗೊಳ್ಳುವವರಿಗಾಗಿ ಈವರೆಗೂ ಇದ್ದ ಟ್ಯಾಕ್ಸ್ ಕಲೆಕ್ಟಡ್ ಸೋರ್ಸ್ ದರವನ್ನು ಶೇ.5 ರಿಂದ ಶೇ. 2ಕ್ಕೆ ಇಳಿಸಲಾಗಿದೆ.
ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಗಡುವನ್ನ ವಿಸ್ತರಣೆ ಮಾಡಲಾಗಿದೆ ಈಗ ಇರುವ ಡಿಸೆಂಬರ್ 31 ರ ಹಿಂದಿನ ಗಡುವಿನ ಬದಲಿಗೆ ಮೌಲ್ಯಮಾಪನ ವರ್ಷದ ಮಾರ್ಚ್ 31 ರ ವರೆಗೂ ಗಡುವು ವಿಸ್ತರಣೆ ಮಾಡಲಾಗಿದೆ ಎಂದು ವಿತ್ತ ಸಚಿವರು ತಿಳಿಸಿದ್ದಾರೆ.
2026-27 ರಲ್ಲಿ ಸಾರ್ವಜನಿಕ ಬಂಡವಾಳ ವೆಚ್ಚವನ್ನ 12.2 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲು ನಿರ್ಧಾರ ಮಾಡಲಾಗಿದೆ.
ವಿವಿಧ ಕ್ಷೇತ್ರಗಳಿಗೆ ಸಚಿವೆ ಬಂಪರ್ ಕೊಡುಗೆಗಳನ್ನು ಘೋಷಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಔಷಧಿಗಳು ಸೇರಿದಂತೆ ಹಲವಾರು ವಸ್ತುಗಳ ದರ ಇಳಿಕೆ ಮಾಡಿದ್ದು, ಜನಸಾಮಾನ್ಯರಿಗೆ ಸಂತಸ ತಂದಿದೆ. ಅಲ್ಲದೇ ಕೆಲವು ವಸ್ತುಗಳ ದರ ಏರಿಕೆ ಕೂಡಾ ಮಾಡಲಾಗಿದೆ.
ವಸ್ತುಗಳ ದರ ಇಳಿಕೆ?
ಚರ್ಮ ಉತ್ಪನ್ನಗಳು,ಮೊಬಿಲಿಟಿ ಫೋನ್, ಇವಿ ಬ್ಯಾಟರಿ,ಶುಗರ್, ಕ್ಯಾನ್ಸರ್ ಔಷಧಿ,
17 ಕ್ಯಾನ್ಸರ್ ಔಷಧ ದರ,
ಸೋಲಾರ್ ಉತ್ಪನ್ನ,
ಜವಳಿ,ಬೀಡಿ,ವಿದೇಶಿ ಯಾತ್ರೆ,ಬಯೋಗ್ಯಾಸ್ ಮಿಶ್ರಿತ ಸಿಎನ್‌ಜಿ,ಮೈಕ್ರೋ ವೇವ್ ಒವೆನ್,
ಕಸ್ಟಮ್ಸ್ ಸುಂಕ,
ಸೆಣಬು ಉತ್ಪನ್ನಗಳು,
7 ಗಂಭೀರ ರೋಗಗಳ ಔಷಧಿ ದರ ಇಳಿಕೆ ಮಾಡಲಾಗಿದೆ.
ದರ ಏರಿಕೆ-
ಸಿಗರೇಟ್,ಮದ್ಯ,ತಂಬಾಕು,
ಆಮದು ಯಂತ್ರೋಪಕರಣಗಳು,
ಹೊರದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳು,
ಅನಗತ್ಯ ಆಮದು ವಸ್ತುಗಳು
ವಿದೇಶದಿಂದ ಆಮದಾಗುವ ಪ್ಲಾಸ್ಟಿಕ್ ವಸ್ತುಗಳು,ನಿರ್ದಿಷ್ಟ ಟೆಲಿಕಾಂ ಉಪಕರಣಗಳ ಬೆಲೆ ಏರಿಕೆಯಾಗಲಿದೆ ಮದ್ಯ, ಸಿಗರೇಟ್ ಪ್ರಿಯರಿಗೆ ಖಂಡಿತಾ ಬರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಜೆಟ್ ನಲ್ಲಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ.
ಮಹಿಳೆಯರಿಗೆ ಗುಡ್ ನ್ಯೂಸ್:
ಮಹಿಳೆಯರು ನಡೆಸುವ ಉದ್ಯಮಗಳಿಗೆ ಉತ್ತೇಜನ ನೀಡಲು ಶಿ ಮಾರ್ಟ್ (SHE-MART) ಆರಂಭಿಸಲಾಗುವುದು ಎಂದು ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಗ್ರಾಮೀಣ ಮಹಿಳೆಯರು ನಡೆಸುವ, ಸ್ವ-ಸಹಾಯ ಉದ್ಯಮಗಳಿಗೆ ಶಿ-ಮಾರ್ಟ್‌ಗಳನ್ನು ಪ್ರಾರಂಭಿಸ ಲಾಗುವುದು. ಇದು ಮಹಿಳೆಯರ ಸಬಲೀಕರಣ ಮಾಡಲು ಸಹಾಯಕವಾಗಿದೆ ಎಂದು ಹೇಳಿದ್ದಾರೆ
ಇದು ಸ್ವ-ಸಹಾಯ ಉದ್ಯಮಿಗಳಿಂದ ನಡೆಸಲ್ಪಡುವ ಮತ್ತು ಸಮುದಾಯದ ಒಡೆತನದ ಚಿಲ್ಲರೆ ಮಾರಾಟ ಮಳಿಗೆಗಳಾಗಿ ಕಾರ್ಯನಿರ್ವಹಿಸುತ್ತದೆ.
ಮಹಿಳೆಯರು ಸಾಲ ಆಧಾರಿತ ಜೀವನೋಪಾಯ ದಿಂದ ತಮ್ಮದೇ ಆದ ಉದ್ಯಮಗಳ ಮಾಲೀಕರಾಗಲು ಸಹಾಯ ಮಾಡಲು ಸರ್ಕಾರ ಬಯಸುತ್ತದೆ ಎಂದು ಸಚಿವೆ ತಿಳಿಸಿದ್ದಾರೆ.

