ಉದ್ಯಮಿಗಳಿಗೆ ಇಡಿ, ಐಟಿ ಬಳಸಿಕೊಂಡು ಕೇಂದ್ರ ಸರ್ಕಾರ ಕಿರುಕುಳ ನೀಡುತ್ತಿದೆ-
ಪ್ತಿಯಾಂಕ್ ಖರ್ಗೆ

ಬೆಂಗಳೂರು: ಕಳೆದ 10 ವರ್ಷಗಳಿಂದ ಮಾತು ಕೇಳದ ಉದ್ಯಮಿಗಳಿಗೆ ಇಡಿ, ಐಟಿ ಬಳಸಿಕೊಂಡು ಕಿರುಕುಳ ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿ ಸಿದ್ದಾರೆ.

ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಬಗ್ಗೆ ಮಾದ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಉದ್ಯಮಿಗಳ ಮೇಲೆ ಕೇಂದ್ರ ಸರ್ಕಾರ ದಬ್ಬಾಳಿಕೆ ಮಾಡುವುದು ಇಡೀ ರಾಷ್ಟ್ರದಲ್ಲಿ ಪ್ರವೃತ್ತಿ ಆಗುತ್ತಿದೆ ಎಂದು ಟೀಕಿಸಿದರು.

ಕಳೆದ 10 ವರ್ಷಗಳಿಂದ ಇಡಿ, ಐಟಿ, ಜಿಎಸ್ಟಿಯಿಂದ ಉದ್ಯಮಿಗಳಿಗೆ ಕಿರುಕುಳ ಆಗುತ್ತಿದೆ. ಕೇಂದ್ರಕ್ಕೆ ತಲೆ ಭಾಗದ ಉದ್ಯಮಿಗಳಿಗೆ ಕಿರುಕುಳ ಆಗುತ್ತಿದೆ ಇದಕ್ಕೆ ಸಾಕಷ್ಟು ಉದಾಹರಣೆ ಇದೆ. ಅಂಬಾನಿ, ಅದಾನಿಗೆ ಇಡಿ, ಐಟಿ ಕಿರುಕುಳ ಏನು ಇಲ್ಲ, ಸರ್ಕಾರ ಅವರಿಗಾಗಿ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂದರೆ ಕಿರುಕುಳ ಅದೆಷ್ಟು ಆಗಿರಬಹುದೊ, ಸಾಮಾನ್ಯ ಜನರಿಗೂ ಇಂತಹ ಕಿರುಕುಳ ಆಗುತ್ತಿದೆ. ಬೇಕಾದರೆ ಸರ್ವೆ ಮಾಡಿ ಗೊತ್ತಾಗುತ್ತದೆ. ಜನರಿಗೆ ತೊಂದರೆ ಕೊಡಲು ಕೇಂದ್ರದ ಬಳಿ ಹೊಸ ಆಯುಧವೇ ಇದೆ. ಕಿರುಕುಳದ ಬಗ್ಗೆ ನಾನು ಹೇಳುತ್ತಿಲ್ಲ,ರಾಯ್ ಕುಟುಂಬ ಹೇಳುತ್ತಿದೆ,ಇದರ ಬಗ್ಗೆ ತನಿಖೆ ಆಗಲಿ ಎಂದು ಸಚಿವರು ಒತ್ತಾಯಿಸಿದರು.

ರಾಯ್ ಅವರು ಕೆಳ ಮಟ್ಟದಿಂದ ಬೆಳೆದ ವ್ಯಕ್ತಿ. ಅವರು ಯಾಕೆ ಹತಾಶೆ ಆಗಿದ್ದರು. ಯಾಕೆ ಅವರು ಇಂತಹ ನಿರ್ಧಾರ ಮಾಡಿದರು ಎಂಬ ಬಗ್ಗೆ ತನಿಖೆ ಮಾಡಲಿ ಸತ್ಯ ಹೊರಗೆ ಬರಲಿ ಐಟಿ ಅಧಿಕಾರಿಗಳ ವಿರುದ್ಧವೂ ತನಿಖೆ ಆಗಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.