ಬಸ್ ಛೇಸ್ ಮಾಡಿ ಚಿನ್ನದ ಸರವಿದ್ದ ಬ್ಯಾಗ್ ತಂದು ಕೊಟ್ಟ ಎಎಸ್ಐ!

ಶ್ರೀರಂಗಪಟ್ಟಣ: ಮಹಿಳೆಯೊಬ್ಬರು ಬಸ್ ನಲ್ಲಿ ಚಿನ್ನದ ಸರ ಇದ್ದ ಬ್ಯಾಗ್ ಮರೆತು ಬಂದಿದ್ದನ್ನು ಸಿನಿಮೀಯ ರೀತಿಯಲ್ಲಿ ಶ್ರೀರಂಗಪಟ್ಟಣ ಎಎಸ್ಐ ಒಬ್ಬರು ಬಸ್ ಛೇಸ್ ಮಾಡಿ ಬ್ಯಾಗ್ ತಂದು ಕೊಟ್ಟು ಶ್ಲಾಘನೀಯ ಕೆಲಸ ಮಾಡಿ ಅಭಿಮಾನಕ್ಕೆ ಪಾತ್ರರಾಗಿದ್ದಾರೆ.

ಬೆಂಗಳೂರು ನಿವಾಸಿ ಲತಾ ಅವರು ತಮ್ಮ ತಾಯಿಯೊಂದಿಗೆ ಮೈಸೂರಿನಿಂದ ಶ್ರೀರಂಗಪಟ್ಟಣ ಬಸ್ ನಲ್ಲಿ ಬಂದು ಇಳಿಯುವಾಗ ಬಸ್ ನಲ್ಲಿ 40 ಗ್ರಾಂ ಚಿನ್ನದ ಸರ ಇಟ್ಟಿದ್ದ ಬ್ಯಾಗ್ ಮರೆತು ಇಳಿದಿದ್ದರು.

ನಂತರ ತಾವು ಬ್ಯಾಗ್ ಮರೆತದ್ದು ಅರಿವಾಗಿ ಬಸ್ ನಿಲ್ದಾಣದಲ್ಲಿ ಕರ್ತವ್ಯ ದಲ್ಲಿದ್ದ ಎಎಸ್ ಐ ಲಕ್ಷ್ಮಣ್ ಗೌಡ ಅವರಿಗೆ ವಿಚಾರ ತಿಳಿಸಿದ್ದಾರೆ.

ಲಕ್ಷ್ಮಣ್ ಗೌಡ ಅವರು ಕೂಡಲೇ ಕಾರ್ಯ ಪ್ರವೃತ್ತ ರಾಗಿ ಮುಂದೆ ಹೋಗುತ್ತಿದ್ದ ಬಸ್ ನ್ನು ಚೇಸ್ ಮಾಡಿ ಅಡ್ಡಗಟ್ಟಿ ಬಸ್ ನಲ್ಲಿದ್ದ 40 ಗ್ರಾಂ ಚಿನ್ನದ ಸರ ಇಟ್ಟಿದ್ದ ಬ್ಯಾಗ್ ಪಡೆದು ಲತಾ ಅವರಿಗೆ ತಲುಪಿಸಿದ್ದಾರೆ.

ಲತಾ ಅವರು ಲಕ್ಷ್ಮಣ್ ಗೌಡ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ನಿಷ್ಠಾವಂತ ಪೊಲೀಸ್ ಲಕ್ಷ್ಮಣ್ ಗೌಡ ಅವರಿಗೆ ನೂರಾರು ಮಂದಿ ಅಭಿಮಾನದಿಂದ ಶುಭ ಕೋರಿದ್ದಾರೆ.