ಮೈಸೂರು, ಮಾ.1: ಚಾಮುಂಡಿಬೆಟ್ಟದಲ್ಲಿ ಪ್ಲಾಸ್ಟಿಕ್ ಮುಕ್ತ ವಲಯ ಘೋಷಣೆ ಮಾಡಿದ್ದರೂ ಅದು ಘೋಷಣೆಗೆ ಸೀಮಿತವಾಗಿದೆ.
ಚಾಮುಂಡಿ ಬೆಟ್ಟದಾದ್ಯಂತ ಹೆಜ್ಜೆ ಹೆಜ್ಜೆಗೂ ಪ್ಲಾಸ್ಟಿಕ್ ರಾಶಿ ಕಂಡು ಬರುತ್ತಿದೆ.
ಪ್ಲಾಸ್ಟಿಕ್ ಮುಕ್ತವಲಯವಾಗಿಸಲು ಜಿಲ್ಲಾಡಳಿತ ಲಕ್ಷಾಂತರ ಖರ್ಚು ಮಾಡಿದೆ. ಆದರೆ ಪ್ರಯೋಜನ ಕಾಣುತ್ತಿಲ್ಲ.
ಪ್ಲಾಸ್ಟಿಕ್ ನಿಷೇಧಿತ ಪ್ರದೇಶ ಎಂದು ಈಗಾಗಲೇ ಘೋಷಣೆ ಮಾಡಿದೆ.
ಆದರೆ ರಾಶಿ ರಾಶಿ ತ್ಯಾಜ್ಯಗಳ ಸಮೇತ ಪ್ಲಾಸ್ಟಿಕ್ ಬಿದ್ದಿರುವುದು ಎದ್ದುಕಾಣುತ್ತಿದೆ,ಇದೆಲ್ಲಾ ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲವೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಅಲ್ಲಲ್ಲಿ ಅಳವಡಿಸಲಾಗಿದ್ದ ಜಾಗೃತಿ ಫಲಕಗಳು ಕಣ್ಮರೆಯಾಗಿದೆ.
ಒಂದೆಡೆ ಚಾಮುಂಡಿಬೆಟ್ಟ ಅಭಿವೃದ್ದಿಗೆ ಪ್ರಾಧಿಕಾರ ರಚಿಸಲಾಗಿದೆ. ಆದರೆ ಪ್ರಾಧಿಕಾರದ ಕಾರ್ಯವನ್ನ ಸಾರ್ವಜನಜಕರು ಪ್ರಶ್ನಿಸುವಂತಾಗಿದೆ.
ಪ್ರತಿದಿನ ಸಾವಿರಾರು ಭಕ್ತರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಅಲ್ಲಲ್ಲಿ ಕಾಣುವ ತ್ಯಾಜ್ಯಗಳು ಪ್ರಾಧಿಕಾರದ ಕಾರ್ಯವೈಖರಿಯನ್ನ ಹಂಗಿಸುತ್ತಿದೆ.
ಲಕ್ಷಾಂತರ ಹಣ ಖರ್ಚು ಮಾಡುತ್ತಿರುವ ಜಿಲ್ಲಾಡಳಿತ ಚಾಮುಂಡಿ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಮಾಡುವುದೆ?.ಕಾದು ನೋಡಬೇಕಿದೆ.
ಕೇವಲ ಸರ್ಕಾರ,ಪ್ರಾಧಿಕಾರ ಅಷ್ಟೇ ಅಲ್ಲ,ಬೆಟ್ಟಕ್ಕೆ ಬರುವ ಜನತೆ ಕೂಡಾ ಪ್ಲಾಸ್ಟಿಕ್ ಕವರ್ ಗಳನ್ನು ಅಲ್ಲಲ್ಲೇ ಬಿಸಾಡಬಾರದು ಕಸದ ಬುಟ್ಟಿಗೆ ಹಾಕುವ ಮೂಲಕ ಚಾಮುಂಡಿ ಬೆಟ್ಟ ವನ್ನು ರಕ್ಷಿಸಬೇಕಿದೆ.

