ವಿದೇಶಿ ಪಕ್ಷಿ ಗಳಿಗೆ ಕಂಟಕ ಪ್ರಾಯವಾದ ಉರುಳು

ಮೈಸೂರು: ವಿದೇಶಗಳಿಂದ ನಮ್ಮ ನಾಡಿಗೆ ವಲಸೆ ಬರುವ ಹಕ್ಕಿಗಳಿಗೆ ಉರುಳು ಕಂಟಕವಾಗಿದೆ.ಪಾಪದ ಪಕ್ಷಿಗಳು ಪ್ರಾಣ ಸಂಕಟದಲ್ಲಿ ಒದ್ದಾಡುತ್ತವೆ.

ಇಂತಹ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಸಮೀಪ ಹದಿನಾರು ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಸ್ಥಳೀಯರು ಯಾರೊ ಯಾವ ಕಾರಣಕ್ಕೋ ಹಾಕಿದ್ದ ಉರುಳು,ನೈಲಾನ್‌ ಜಾಲದಲ್ಲಿ ಹಲವು ವಲಸೆ ಹಕ್ಕಿಗಳು ಸಿಲುಕಿಕೊಂಡು ಹಾರಲು ಸಾಧ್ಯವಾಗದೆ ತೀವ್ರ ತೊಂದರೆ ಅನುಭವಿಸಿವೆ.

ವಿಷಯ ತಿಳಿದ ಕೂಡಲೇ ಸ್ಥಳೀಯರು ಹಾಗೂ ಪ್ರಾಣಿ-ಪಕ್ಷಿ ರಕ್ಷಕರು ಸ್ಥಳಕ್ಕೆ ಧಾವಿಸಿ ಕೆಲವು ಹಕ್ಕಿಗಳನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾದರು.

ಈ ಭಾಗದ ಕೆರೆ ಹಾಗೂ ಜಲಾವೃತ ಪ್ರದೇಶಗಳಿಗೆ ಪ್ರತಿವರ್ಷ ವಿದೇಶಿ ವಲಸೆ ಹಕ್ಕಿಗಳು ಆಗಮಿಸುತ್ತವೆ. ಆದರೆ ಅಕ್ರಮವಾಗಿ ಹಾಕಲಾಗುವ ಉರುಳು ಹಾಗೂ ಜಾಲಗಳು ಆ ಪಕ್ಷಿಗಳಿಗೆ ಮರಣ ಮೃದಂಗವಾಗಿದೆ ಎಂದು ಪಕ್ಷಿ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಹೀಗೆ ಉರುಳು ಹಾಕಿ ಪಕ್ಷಿಗಳಿಗೆ ಕಂಠಕಪ್ರಾಯ ರಾಗಿರುವವರ ವಿರುದ್ಧ ಕ್ರಮ ಜರುಗಿಸುವ ಅಗತ್ಯವಿದೆ.