ಮೈಸೂರು: ಒಂಟಿಕೊಪ್ಪಲ್ ಪಂಚಾಂಗವು ದೇಶವಿದೇಶಗಳಲ್ಲಿ ಜನಪ್ರಿಯವಾಗಿರುವುದು ಮೈಸೂರಿನ ಹಿರಿಮೆಯನ್ನು ಹೆಚ್ಚಿಸಿದೆ ಎಂದು ಶಾಸಕ ಹರೀಶ್‌ಗೌಡ ಬಣ್ಣಿಸಿದರು.
ಕೆ. ಹರೀಶ್ ಗೌಡ ಸ್ನೇಹ ಬಳಗದ ವತಿಯಿಂದ ಸದ್ವಿದ್ಯಾ ಶಿಕ್ಷಣ ಸಂಸ್ಥೆಯಲ್ಲಿ ಚಾಂದ್ರಮಾನ
ಯುಗಾದಿ ಹಬ್ಬದ ಅಂಗವಾಗಿ
ಬ್ರಾಹ್ಮಣ ಕುಟುಂಬದವರಿಗೆ ಶಾಸಕ ಕೆ. ಹರೀಶ್ ಗೌಡರವರು ಪಂಚಾಂಗ ನೀಡಿ ಯುಗಾದಿ ಹಬ್ಬದ ಶುಭಾಶಯ ಕೋರಿ ಮಾತನಾಡಿದರು.
ಪ್ರತಿನಿತ್ಯ ದೇವರಲ್ಲಿ ಸರ್ವೇ ಜನ ಸುಖಿನೋ ಭವಂತು ಎಂದು ದೇವರಲ್ಲಿ ದಿನನಿತ್ಯ ಪ್ರಾರ್ಥಿಸುವ ಸಮುದಾಯವೆಂದರೆ ಅದು ಬ್ರಾಹ್ಮಣ ಸಮುದಾಯ, ಧಾರ್ಮಿಕ ಸಂಪ್ರಾದಯವನ್ನು ಪರಿಪಾಲಿಸುವವರು ಪಂಚಾಂಗದ ಮಾಹಿತಿಯನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ ಡಿ ಗೋಪಿನಾಥ್, ಹಿರಿಯ ಸಮಾಜ ಸೇವಕರಾದ ರಘುರಾಮ್ ವಾಜಪಾಯಿ, ಅಮೃತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಮೈ ಕುಮಾರ್, ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಕೃಷ್ಣಮೂರ್ತಿ, ಯೋಗ ನರಸಿಂಹ (ಮುರಳಿ), ವೀರರಾಘವ,
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ರಾಮರಾಜ್ ,ರಾಕೇಶ್ ಭಟ್, ನವೀನ್ , ರವಿಚಂದ್ರ, ವಿಜಯ್ ಕುಮಾರ್ , ಚಕ್ರಪಾಣಿ, ಶ್ರೀಕಾಂತ ಕಶ್ಯಪ್,ಸುದರ್ಶನ್,
ಸಂದೀಪ್,ಶ್ರೀಕಾಂತ್ ಚೆನ್ನಿಗ ಮತ್ತಿತರರು ಉಪಸ್ಥಿತರಿದ್ದರು.

