ಡಿಜಿಟಲ್ ಅರೆಸ್ಟ್ ಭೀತಿ ಹುಟ್ಟಿಸಿ ವೃದ್ದರಿಗೆ 8 ಲಕ್ಷ ಪಂಗನಾಮ!

ಮೈಸೂರು: ಡಿಜಿಟಲ್ ಅರೆಸ್ಟ್ ನಂತಹ ಯಾವುದೇ ಕರೆ ಬಂದರೆ ನಂಬಬೇಡಿ ಎಂದು ಪೊಲೀಸ್ ಇಲಾಖೆ ಜನತೆಗೆ ಎಚ್ವರಿಕೆ ನೀಡುತ್ತಲೇ ಇದೆ.ಜತೆಗೆ ಟಿವಿ ಮತ್ತಿತರ ಮಾಧ್ಯಮಗಳಲ್ಲೂ ಜಾಹೀರಾತು ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.ಆದರೂ ಮೋಸ ಹೋಗುವುದಂತೂ ತಪ್ಪಲೇ ಇಲ್ಲ.

ಇದೀಗ ಸಾಂಸ್ಕೃತಿಕ ನಗರಿಯಲ್ಲಿ ಇಂತಹ ಘಟನೆ ನಡೆದಿದೆ.

ಡಿಜಿಟಲ್ ಅರೆಸ್ಟ್ ಭೀತಿ ಹುಟ್ಟಿಸಿ ವೃದ್ದರೊಬ್ಬರಿಗೆ 8,50,047 ರೂಪಾಯಿ ವಂಚಿಸಿರುವ ಪ್ರಕರಣ ಮೈಸೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಆಲನಹಳ್ಳಿಯ ನಿವಾಸಿ ಶ್ರೀವತ್ಸ(78) ಎಂಬುವರು ವಂಚನೆಗೆ ಒಳಗಾಗಿದ್ದಾರೆ.

17-01-2026 ರಂದು ವಂಚಕ ಶ್ರೀವತ್ಸ ರವರನ್ನ ಸಂಪರ್ಕಿಸಿ ತಮ್ಮ ಏರ್ ಟೆಲ್ ಸಿಮ್ ನಿಂದ ಹಲವಾರು ಮಹಿಳೆಯರಿಗೆ ಕರೆಮಾಡಿ ಅಸಭ್ಯವಾಗಿ ಮಾತನಾಡಿದ್ದೀರಿ, ಈ ಬಗ್ಗೆ ಮುಂಬೈ ಕ್ರೈಂ ಬ್ರಾಂಚ್ ನಲ್ಲಿ ದೂರು ದಾಖಲಾಗಿದೆ ಎಂದು ಬೆದರಿಸಿದ್ದಾನೆ.

ಅಲ್ಲದೆ ತಮ್ಮ ವಿರುದ್ದ ಮನಿ ಲಾಂಡ್ರಿಂಗ್ ಕೇಸ್, ನರೇಶ್ ಗೋಯಲ್ ಕೇಸ್ ನಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆ ಹಾಗಾಗಿ ನೀವು ಹೌಸ್ ಅರೆಸ್ಟ್ ಆಗಿದ್ದೀರಿ ಎಂದು ಬೆದರಿಕೆ ಹಾಕಿದ್ದಾನೆ.

ನಿಮ್ಮ ಖಾತೆ ಪರಿಶೀಲಿಸುವುದಾಗಿ ತಿಳಿಸಿ 13-03-2026 ರಿಂದ 17-03-2026 ರವರೆಗೆ 8,50,047 ರೂ ವರ್ಗಾವಣೆ ಮಾಡಿಕೊಂಡಿದ್ದಾನೆ.

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿ 8,59,047/- ಹಣ ವಂಚಿಸಿದ್ದಾರೆಂದು ಆರೋಪಿಸಿ ಶ್ರೀವತ್ಸ ಅವರು ಸೆನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.