ಇಂದೋರ್‌ನಲ್ಲಿ ಅಗ್ನಿ ದುರಂತ-ಒಂದೇ ಕುಟುಂಬದ 8 ಮಂದಿ ಸಜೀವ ದಹನ

ಭೋಪಾಲ್: ಮಧ್ಯಪ್ರದೇಶದ ಇಂದೋರ್‌ ನ ತಿಲಕ್ ನಗರದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿ, ಒಂದೇ ಕುಟುಂಬದ ಎಂಟು ಮಂದಿ ಸಜೀವ ದಹನವಾಗಿರುವ‌ ಘನಘೋರ ಘಟನೆ ನಡೆದಿದೆ.

ವಿಜಯ್ ಸೇಥಿಯಾ (65), ಸುಮನ್ (60), ಮನೋಜ್ ಪುಗಲಿಯಾ (65), ಸಿಮ್ರಾನ್ (30), ಟಿನು (35), ಛೋಟು ಸೇಥಿಯಾ (22), ಮತ್ತು 12 ವರ್ಷದ ರಾಶಿ ಸೇಥಿಯಾ ಮೃತಪಟ್ಟ ದುರ್ದೈವಿಗಳು.

ಇನ್ನು ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಮೃತರ ಸಂಖ್ಯೆ 8ಕ್ಕೆ ಏರಿಕೆಯಾದಂತಾಗಿದೆ.

ಮನೆಯ ಹೊರಭಾಗದಲ್ಲಿ ಎಲೆಕ್ಟ್ರಿಕ್ ವಾಹನವನ್ನು ಚಾರ್ಜ್ ಮಾಡುತ್ತಿದ್ದ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಮಾಡಿದರು.

ಮನೆಯೊಳಗೆ ಹಲವು ಎಲ್‌ಪಿಜಿ ಸಿಲಿಂಡರ್‌ಗಳು ಇದ್ದುದರಿಂದ ಬೆಂಕಿ ಆವರಿಸಿ, ಸಿಲಿಂಡರ್ ಗಳಿಗೂ ತಗುಲಿ ಸ್ಫೋಟಗೊಂಡಿವೆ.