ವಿಜೃಂಭಣೆಯಿಂದ ನೆರವೇರಿದ ಗೌತಮ ಪಂಚ ಮಹಾ ರಥೋತ್ಸವ

ಮೈಸೂರು: ದಕ್ಷಿಣ ಕಾಶಿ ಖ್ಯಾತಿಯ ನಂಜನಗೂಡಿನಲ್ಲಿ ಶ್ರೀ ನಂಜುಂಡೇಶ್ವರ ಪಂಚ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಗೌತಮ ಪಂಚ ಮಹಾ ರಥೋತ್ಸವದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಭಕ್ತ ಸಾಗರವೇ ಹರಿದು ಬಂದಿತ್ತು.

ರಥೋತ್ಸವಕ್ಕೆ ಗಣ್ಯರು ಚಾಲನೆ ನೀಡಿದ ನಂತರ
ನಂಜನಗೂಡಿನ ರಥ ಬೀದಿಗಳಲ್ಲಿ ಪಂಚ ರಥಗಳು ಸಾಗಿ ಬಂದವು.

ಶ್ರೀ ಕಂಠೇಶ್ವರ, ಪಾರ್ವತಿ, ಗಣೇಶ, ಸುಬ್ರಮಣ್ಯ, ಚಂಡಿಕೇಶ್ವರ ರಥಗಳು ಒಂದರ ಹಿಂದೆ ಒಂದು ನಿಧಾನವಾಗಿ ಚಲಿಸಿದವು.ಈ ವೇಳೆ ಭಕ್ತರು ಉಘೇ,ಉಘೇ ಎಂದು ಭಕ್ತಿಯಿಂದ ಕೂಗಿ ರಥಗಳಿಗೆ ಹೂ ಎಸೆದರು.

ರಥೋತ್ಸವದಲ್ಲಿ ಶಾಸಕ ದರ್ಶನ್ ಧ್ರುವ ನಾರಾಯಣ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಎಡಿಎ ಶಿವರಾಜ್ ಸೇರಿ ಗಣ್ಯರು ಭಾಗವಹಿಸಿದ್ದರು.

ನಂಜನಗೂಡಿನಲ್ಲಿ ಇಂದಿನಿಂದ ದೊಡ್ಡ ಜಾತ್ರೆ‌ ಪ್ರಾರಂಭವಾಗಿದ್ದು ಸಂಭ್ರಮ ಕಳೆಗಟ್ಟಿದೆ. ಮುಂಜಾನೆಯಿಂದ ಶ್ರೀಕಂಠೇಶ್ವರನಿಗೆ ವಿಶೇಷ ಪೂಜಾ ಕೈಂಕರ್ಯಗಳು,ಅಭಿಷೇಕ ಗಳು ನೆರವೇರಿದವು.

ಇತಿಹಾಸ ಪ್ರಸಿದ್ಧ ಗೌತಮ ಪಂಚಮ ರಥೋತ್ಸವಕ್ಕೆ ಮುಂಜಾನೆ 5.50 ರಿಂದ 6.30 ರ ಶುಭ ಮೀನ ಲಗ್ನದಲ್ಲಿ ಚಾಲನೆ ದೊರೆಯಿತು.

ಭಕ್ತರು ಶ್ರೀಕಂಠಶ್ವೇರ ರಥ ಎಳೆದು ಭಕ್ತಿ ಸಮೆ್ಪಿಸಿ ಧನ್ಯರಾದರು.ರಾಜ ಬೀದಿಯಲ್ಲಿ ಗೌತಮ ಪಂಚ ರಥೋತ್ಸವ ಸಾಗಿದಾಗ, ರಥಕ್ಕೆ ಹಣ್ಣು ಜವನ ಎಸೆದು ಭಕ್ತರು ಪ್ರಾರ್ಥನೆ ಸಲ್ಲಿಸಿದರು,ಎಲ್ಲೆಲ್ಲೂ ಉಘೇ ನಂಜುಂಡೇಶ್ವರ ಘೋಷಣೆಗಳು ಕೇಳಿ ಬಂದವು.