ಅಪ್ರಾಪ್ತ ಬಾಲಕಿಯ ಅಪಹರಿಸಿ ಲೈಂಗಿಕ ಪೀಡನೆಗೆ ಒತ್ತಾಯ: ವ್ಯಕ್ತಿಗೆ ಶಿಕ್ಷೆ

ಚಾಮರಾಜನಗರ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ಪೀಡನೆಗೆ ಒತ್ತಾಯಿಸುತ್ತಿದ್ದ ವ್ಯಕ್ತಿಗೆ‌ ಚಾಮರಾಜನಗರ ಅಧಿಕ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-1 ವಿಶೇಷ ಪೋಕ್ಸೊ ನ್ಯಾಯಾಧೀಶರಾದ
ಎಸ್. ಜೆ ಕೃಷ್ಣ ಅವರು ಅಧಿಕ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-1 ವಿಶೇಷ ಪೋಕ್ಲೋ ನ್ಯಾಯಾಧೀಶರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ನರಸಮಂಗಲ ಗ್ರಾಮದ ವಾಸಿ ಸೋಮಶೇಖರ (23) ಎಂಬಾತನಿಗೆ ಶಿಕ್ಷೆ ವಿಧಿಸಲಾಗಿದೆ.

3 ವರ್ಷ ಸಾದಾ ಸಜೆ, 15.000ರೂ ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಸಾದಾ ಶಿಕ್ಷೆ ಹಾಗೂ ಪೋಕೋ ಕಾಯ್ದೆ ಕಲಂ. 12ಕ್ಕೆ 1 ವರ್ಷ ಸಾದಾರಣಾ ಶಿಕ್ಷೆ ಹಾಗೂ 5.000 ರೂ ದಂಡ, ದಂಡ ತೆರಲು ತಪ್ಪಿದಲ್ಲಿ 2 ತಿಂಗಳು ಸಾದಾ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಲಾಗಿದೆ.

ಈ ಪ್ರಕರಣದಲ್ಲಿ ಆರೋಪಿಗೆ ವಿಧಿಸಿರುವ ದಂಡದ ಮೊತ್ತದಲ್ಲಿ 15.000 ರೂಪಾಯಿಗಳನ್ನು ನೊಂದ ಬಾಲಕಿಗೆ ಪರಿಹಾರವಾಗಿ ನೀಡಲು ಆದೇಶಿಸಿ ನ್ಯಾಯಾಲಯವು ತೀರ್ಪು ನೀಡಿತು.

ಆರೋಪಿ ಸೋಮಶೇಖರನು 14 ವರ್ಷದ ನೊಂದ ಬಾಲಕಿಯನ್ನು ಪ್ರೀತಿಸುತ್ತಿದ್ದ ವಿಚಾರ ತಂದೆ ತಾಯಿಗೆ ಗೊತ್ತಾಗಿ ನೊಂದ ಬಾಲಕಿಗೆ 18 ವರ್ಷ ತುಂಬಿದ ನಂತರ ಪೋಷಕರು ಮದುವೆ ಮಾಡಲು ನಿರ್ಧರಿಸಿದ್ದರು.

ಈ ವಿಷಯ ತಿಳಿದ ಆರೋಪಿ 25.05.2024 ರಂದು ನೊಂದ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಬೆಂಗಳೂರಿನಲ್ಲಿ ಇರಿಸಿ ಬಾಲಕಿ ಜೊತೆ ಲೈಂಗಿಕವಾಗಿ ಪೀಡಿಸುತ್ತಿದ್ದ.

ಇದು ಸಾಬೀತಾದ ಕಾರಣ ಆರೋಪಿತನಿಗೆ ದಂಡ ಸಂಹಿತೆ ಕಲಂ 363 ಮತ್ತು ಪೋಕ್ಸೊ ಕಾಯ್ದೆ ಕಲಂ 12 ಕ್ಕೆ ಶಿಕ್ಷೆ ಮತ್ತು ದಂಡಗಳನ್ನು ವಿಧಿಸಿ ನ್ಯಾಯಾಲಯವು ತೀರ್ಪು ನೀಡಿದೆ.

ಈ ಪ್ರಕರಣದಲ್ಲಿ ತನಿಖಾಧಿಕಾರಿ ಹೆಚ್.ಬಿ ಮಾದೇಗೌಡರವರು ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್, ಮಹಿಳಾ ಪೊಲೀಸ್ ಠಾಣೆ ಚಾಮರಾಜನಗರ ರವರು ತನಿಖೆ ಪೂರೈಸಿ ಆರೋಪಿತನ ವಿರುದ್ಧ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.