ವಿಜಯ್ ದಳಪತಿ ಗೆಲುವಿಗಾಗಿ ಮೈಸೂರಿನಿಂದ ಸೈಕಲ್ ಯಾತ್ರೆ !

ಮೈಸೂರು: ತಮಿಳುನಾಡು ಸಾರ್ವತ್ರಿಕ ಚುನಾವಣೆಯಲ್ಲಿ ಯೂತ್ ಐಕಾನ್ ಎಂದೇ ಬಿಂಬಿತವಾದ ಸ್ಟಾರ್ ವಿಜಯ್ ದಳಪತಿ ನೇತೃತ್ವದ ತಮಿಳ್ ವೆಟ್ರಿ ಕಳಗಂ ಪಕ್ಷ ಸ್ಪರ್ಧಿಸಿದೆ.

233 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಗೆಲುವಿಗಾಗಿ ವಿಜಯ್ ದಳಪತಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.ಅದೇನೊ ಸರೀನೆ ಆದರೆ ಮೈಸೂರಿನಲ್ಲೂ ದಳಪತಿ ಫ್ಯಾನ್ ವಿನೋತನ ಪ್ರಚಾರ ಮಾಡ್ತಿರೋದು ವಿಶೇಷ.

ವಿಜಯ್ ದಳಪತಿಗೆ ಬೆಂಬಲದ ಮಹಾಪೂರವೇ ಹರಿದುಬಂದಿದೆ.ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಸಹ ಬೆಂಬಲ ವ್ಯಕ್ತವಾಗಿದೆ.ವಿಜಯ್ ದಳಪತಿ ಕಟ್ಟಾ ಅಭಿಮಾನಿಯಾದ ಅರುಳ್ ಸೆಲ್ವಂ ಅವರು ಚೆನ್ನೈಗೆ ಸೈಕಲ್ ಯಾತ್ರೆ ಕೈಗೊಳ್ಳುವ ಮೂಲಕ ಬೆಂಬಲ ಸೂಚಿಸಿದ್ದಾರೆ.

ನಗರದ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಸೈಕಲ್ ಯಾತ್ರೆ ಆರಂಭಿಸಿದ್ದಾರೆ.

ಏಪ್ರಿಲ್ 23 ರಂದು ಚೆನ್ನೈ ತಲುಪಲಿರುವ ಅರುಳ್ ಸೆಲ್ವಂ ಪ್ರಚಾರದಲ್ಲಿ ಕಾರ್ಯಕರ್ತರಾಗಿ ಭಾಗವಹಿಸಲು ನಿರ್ಧರಿಸಿದ್ದಾರೆ.

ಪ್ರತಿದಿನ 100 ಕಿ ಮೀ ಕ್ರಮಿಸಿ ಚೆನ್ನೈ ತಲುಪಲಿರುವ ಅರುಳ್ ಸೆಲ್ವಂ ಅವರು ವಿಜಯ್ ದಳಪತಿ ಮುಖ್ಯಮಂತ್ರಿ ಆಗಿ ಜನರ ಸೇವೆ ಮಾಡಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದಾರೆ.