ದಳಪತಿ ಬ್ಯಾಟಿಂಗ್ ಗೆ ಡಿಎಂಕೆ ಧೂಳಿಪಟ ಸಿಎಂ ಸ್ಟಾಲಿನ್ ಗೆ ಸೋಲು

ಚೆನ್ನೈ: ತಮಿಳುನಾಡಿನ ಹಾಲಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಸ್ವ ಕ್ಷೇತ್ರದಲ್ಲೇ ಸೋಲನುಭವಿಸಿದ್ದಾರೆ.

ಹಾಗಾಗಿ ಸತತ 2ನೇ ಬಾರಿಗೆ ಸರ್ಕಾರ ರಚಿಸುವ ಉತ್ಸಾಹದಲ್ಲಿದ್ದ ಡಿಎಂಕೆ ಪಕ್ಷಕ್ಕೆ ಭಾರೀ ಮುಖಭಂಗ ವಾಗಿದೆ.

2011 ರಿಂದಲೂ ಸತತವಾಗಿ ಗೆದ್ದು ಬರುತ್ತಿದ್ದ ಕೊಳತ್ತೂರು ಕ್ಷೇತ್ರದಲ್ಲೇ ಸ್ಟಾಲಿನ್‌ ಟಿವಿಕೆ ಅಭ್ಯರ್ಥಿ ವಿ.ಎಸ್‌ ಬಾಬು ಅವರ ವಿರುದ್ಧ ಸೋಲನುಭವಿ ಸಿದ್ದಾರೆ‌

ಸತತ 3 ಬಾರಿ ಕೊಳತ್ತೂರು ಕ್ಷೇತ್ರದಿಂದ ಗೆದ್ದಿದ್ದ ಸ್ಟಾಲಿನ್‌, 2021ರ ಚುನಾವಣೆಯಲ್ಲಿ ಎಐಎಡಿ ಎಂಕೆಯ ಆದಿ ರಾಜಾರಾಮ್ ವಿರುದ್ಧ 70,384 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು.

ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲೊಂದಾದ ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏ.23 ರಂದು ಮತದಾನ ನಡೆದಿತ್ತು.

ರಾಜ್ಯದಲ್ಲಿ ದಾಖಲೆಯ 4,654 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ 3,579 ಪುರುಷ ಮತ್ತು 443 ಮಹಿಳಾ ಮತದಾರರು ಸ್ಪರ್ಧಿಸಿದ್ದರು.

84.69% ಮತದಾನ ನಡೆದಿತ್ತು. ರಾಜ್ಯದಲ್ಲಿ ಬಹುಮತಕ್ಕೆ 118 ಸ್ಥಾನಗಳು ಬೇಕಿದೆ. ರಾಜ್ಯದಲ್ಲಿ ಆಡಳಿತಾರೂಢ ಡಿಎಂಕೆ ಮೈತ್ರಿಕೂಟ, ಎಐಎಡಿಎಂಕೆ ಮೈತ್ರಿಕೂಟ, ನಟ ವಿಜಯ್‌ ನೇತೃತ್ವದ ಟಿವಿಕೆ, ಎನ್‌ಟಿಕೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದವು.

ಕಳೆದ ಚುನಾವಣೆಯಲ್ಲಿ ಎಐಎಡಿಎಂಕೆ ಆಡಳಿತವನ್ನು ಅಂತ್ಯಗೊಳಿಸಿ ಡಿಎಂಕೆ ನೇತೃತ್ವದ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿತು.

ಆದರೆ ಈ ಬಾರಿ ದಳಪತಿ ವಿಜಯ್ ಅಬ್ಬರದಿಂದಾಗಿ ಎಲ್ಲಾ ಉಲ್ಟಾಪಲ್ಟಾ ಆಗಿದೆ.ಟಿವಿಕೆ ಪಕ್ಷ ಭರ್ಜರಿ ಬ್ಯಾಟಿಂಗ್ ಮಾಡಿದೆ.

ಯಾರು ಮುಖ್ಯ ಮಂತ್ರಿ ಆಗುವರೊ ಕಾದು ನೋಡಬೇಕಿದೆ.