ದಾವಣಗೆರೆ ಬೈ ಎಲೆಕ್ಷನ್:ಗೆಲುವು ಸಾಧಿಸಿದ ಸಮರ್ಥ್ ಶಾಮನೂರು

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರ ಮೊಮ್ಮಗ, ಕಾಂಗ್ರೆಸ್​​ ಅಭ್ಯರ್ಥಿ ಸಮರ್ಥ್ ಶಾಮನೂರು ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ್ ಕರಿಯಪ್ಪ ಅವರ ವಿರುದ್ಧ ಸಮರ್ಥ್ ಗೆಲುವು ಪಡೆದಿದ್ದಾರೆ.

ಎಣಿಕೆ ಪ್ರಾರಂಭದಿಂದಲೂ ಸಮರ್ಥ್ ಮುನ್ನಡೆ‌ ಸಾಧಿಸಿ ಕೊಂಡೇ ಬಂದರು ಒಂದೆರಡು ಸುತ್ತಿನಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿದ್ದರು, ನಂತರ ಮುನ್ನಡೆ ಕಾದುಕೊಂಡು ಕಡೆಗೂ ಗೆದ್ದು ಬೀಗಿದರು.

ಸಮರ್ಥ್ ಶಾಮನೂರು ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೆಸ್​​ ಕಾರ್ಯಕರ್ತರು ಅವರನ್ನು ಎತ್ತಿಕೊಂಡು ಜಯಘೋಷ ಕೂಗುತ್ತಾ ಸಂಭ್ರಮಾಚರಣೆ ಮಾಡಿದರು.

ಆದರೆ ಸಮರ್ಥ್ ಅವರಿಗೆ ಬಂಡಾಯದ ಬಿಸಿ ತಟ್ಟಿದ್ದರಿಂದ ಭಾರೀ ಅಂತರದಿಂದ ಗೆಲುವು ಸಾಧಿಸಲಾಗಿಲ್ಲ.ಕಡಿಮೆ ಅಂತರದಿಂದ ಗೆದ್ದಿದ್ದಾರೆ.

ಕೆಲವರು ಮುಸ್ಲಿಂ ಮತಗಳು ವಿಭಜನೆ ಆಗುವಂತೆ ಮಾಡಿದ್ದು, ಕಾಂಗ್ರೆಸ್​​ನ 22 ಸಾವಿರ ಮತಗಳು ಬೇರೆಯವರ ಪಾಲಾಗ
ದಂತಾಗಿದೆ.