ಹೈ ಕಮಾಂಡ್ ಹೇಳಿದರೆ 5 ವರ್ಷವೂ ನಾನೇ ಸಿಎಂ ಆಗಿರುತ್ತೇನೆ-ಸಿದ್ದರಾಮಯ್ಯ

ಮೈಸೂರು: ನಮ್ಮ ಪಕ್ಷದ ಹೈ ಕಮಾಂಡ್ ಹೇಳಿದರೆ 5 ವರ್ಷವೂ ನಾನೇ ಸಿಎಂ ಆಗಿ ಇರುತ್ತೇನೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ,ನಾನು ಹೈಕಮಾಂಡ್ ಮಾತನ್ನ ಮಾತ್ರ ಕೇಳುವುದು ಬೇರೆ ಯಾರ ಮಾತಿಗೂ ಬೆಲೆ ಇಲ್ಲ ಎಂದು ಹೇಳಿದರು.

ನೀವು ಎಷ್ಟೇ ಭಾರಿ ಈ ಪ್ರಶ್ನೆಯನ್ನ ಕೇಳಿದರು ನನ್ನ ಉತ್ತರ ಹೈಕಮಾಂಡ್ ಅಷ್ಟೇ‌ ಎಂದು ಮಾಧ್ಯಮದವರಿಗೇ ಸಿದ್ದು ಟಾಂಗ್ ನೀಡಿದರು.

ರಾಜ್ಯದಲ್ಲಿ 5 ವರ್ಷವೂ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುತ್ತದೆ,ನನ್ನನ್ನು ಇರಿ ಎಂದರೇ ಇರುತ್ತೇನೆ,ಎಲ್ಲವನ್ನೂ ತೀರ್ಮಾನ ಮಾಡುವುದು ಹೈಕಮಾಂಡ್ ಎಂದು ತಿಳಿಸಿದರು.

ಬೇರೆ ಯಾರೋ ಏನೇನೊ ಮಾತನಾಡಿದರೆ ಅದು ಅವರ ವೈಯಕ್ತಿಕ,ನಮಗೆ ಹೈಕಮಾಂಡ್ ಅಂತಿಮ ಎಂದು ಸಿದ್ದರಾಮಯ್ಯ ಹೇಳಿದರು.

ಶೃಂಗೇರಿ ಉಪಚುನಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ,
ಅಂಚೆ ಮತಗಳನ್ನ ಖುದ್ದು ಜೀವರಾಜ್ ಮತ್ತು ಚುನಾವಣಾ ಸಿಬ್ಬಂದಿ ಸೇರಿಕೊಂಡು ತಿದಿದ್ದಾರೆ ಎಂದು ದೂರಿದರು.

ಅಂದು ಫಲಿತಾಂಶ ಬರುವಾಗ ಬಿಜೆಪಿ ಸರ್ಕಾರ ಇತ್ತು,ಅವರ ನಿರ್ಧೇಶನದಂತೆ ಚುನಾವಣಾ ಸಿಬ್ಬಂದಿಗಳು ಜೀವರಾಜ್ ಜೊತೆ ಸೇರಿ ಅಂಚೆ ಮತ ತಿದಿದ್ದಾರೆ.
ಫಲಿತಾಂಶದ ದಿನ ಮತ ಪತ್ರದಲ್ಲಿ ಇಲ್ಲದ ಗೆರೆ ಇಗ ಹೇಗೆ ಬಂತು ಎಂದು ಪ್ರಶ್ನಿಸಿದ ಮುಖ್ಯ ಮಂತ್ರಿಗಳು,ಈ ವಿಚಾರದಲ್ಲಿ ನಾವು ಕೋರ್ಟ್ ಮೊರೆ ಹೋಗುತ್ತೇವೆ‌ ಎಂದು ಸಿದ್ದರಾಮಯ್ಯ ಹೇಳಿದರು ‌

ನನ್ನನ್ನು ರಾಹುಲ್ ಗಾಂಧಿ ಅವರು ಇದುವರೆಗೆ ದೆಹಲಿಗೆ ಕರೆದಿಲ್ಲ,
ನಾನು ಕೂಡ ಅವರ ಅಪಾಯಿಂಟ್ ಮೆಂಟ್ ಕೇಳಿಲ್ಲ,ಅವರು ತಾವಾಗಿಯೇ ನನ್ನನ್ನು ಕರೆದರೆ ನಾನು ಹೋಗುತ್ತೇನೆ ಎಂದು ಸಿಎಂ ಹೇಳಿದರು.

ಅಪಾಯಿಂಟ್ ಮೆಂಟ್ ಫಿಕ್ಸ್ ಆದ ಮೇಲೆ ಸಂಪುಟ ಪುನಾರಚನೆಯಾ? ಸಂಪುಟ ವಿಸ್ತರಣೆಯಾ ಯಾವ ವಿಷಯದ ಚರ್ಚೆ ಎಂಬುದು ಆಗ ಗೊತ್ತಗಲಿದೆ.
ಅವರು ನನ್ನನ್ನು ಕರೆದೇ ಇಲ್ಲ ಎಂದಮೇಲೆ ಸಭೆಯ ಅಜೆಂಡಾ ಹೇಗೆ ಫಿಕ್ಸ್ ಆಗುತ್ತದೆ ಎಂದು ಮಾಧ್ಯಮದವರನ್ನೇ ಮುಖ್ಯ ಮಂತ್ರಿಗಳು ಪ್ರಶ್ನಿಸಿದರು.