ಕಡೆಗೂ ವಿಜಯ್ ಗೆ ಒಲಿದ ತಮಿಳುನಾಡು ಮುಖ್ಯ ಮಂತ್ರಿ ಪಟ್ಟ

ಚೆನ್ನೈ: ಅಂತೂ ಇಂತೂ ಕಡೆಗೂ ತಮಿಳುನಾಡು ಮುಖ್ಯ ಮಂತ್ರಿಯಾಗಿ‌ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಅಧಿಕಾರ ‌ಸ್ವೀಕರಿಸಿದ್ದಾರೆ.

ವಿಜಯ್ ಮುಖ್ಯ ಮಂತ್ರಿ ಆಗೋದೇ ಇಲ್ಲ, ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಹೀಗೆ ಏನೇನೋ ಊಹಾಪೋಹಗಳು ಹಬ್ಬಿದ್ದವು.ಅಂತೂ ಕಡೆಗೂ ಎಲ್ಲದಕ್ಕೂ ತೆರೆಬಿದ್ದಿದೆ.ಅವರು ಮುಖ್ಯ ಮಂತ್ರಿ ಆಗಿದ್ದಾರೆ. ಅಭಿಮಾನಿಗಳು ಫುಲ್ ಖುಷ್.

ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಕೂಡಲೇ ವಿಜಯ್ ಅವರು200 ಯೂನಿಟ್ ಉಚಿತ ವಿದ್ಯುತ್ ಹಾಗೂ ಮಹಿಳೆಯರಿಗೆ ವಿಶೇಷ ಕಾರ್ಯಪಡೆ ರಚಿಸುವುದಾಗಿ ಗ್ಯಾರಂಟಿಗಳನ್ನು ಘೋಷಿಸಿದ್ದಾರೆ.

ಗೃಹ ಬಳಕೆದಾರರಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಕಡತಕ್ಕೆ ವಿಜಯ್ ಸಹಿ ಹಾಕಿದ್ದಾರೆ. ಈ ಸಂದರ್ಭ ಮಹಿಳೆಯರ ರಕ್ಷಣೆಗಾಗಿ ವಿಶೇಷ ಪಡೆ ರಚಿಸುವುದಾಗಿ ಭರವಸೆ ನೀಡಿದ್ದಾರೆ.

ಪ್ರಮಾಣವಚನ ಸ್ವೀಕಾರ ಬಳಿಕ ಮಾತನಾಡಿದ ವಿಜಯ್, ನಾನು ಯಾವುದೇ ರಾಜಮನೆತನದಿಂದ ಬಂದವನಲ್ಲ, ನಾನು ಕಷ್ಟವನ್ನು ಅನುಭವಿಸಿದ್ದೇನೆ. ಜನರೇ ನನ್ನನ್ನು ಆರಿಸಿದ್ದಾರೆ. ಸುಳ್ಳು ಭರವಸೆಗಳನ್ನು ನೀಡಿ ನಾನು ಮೋಸ ಮಾಡುವುದಿಲ್ಲ ಹೇಳಿದರು.

ತಮಿಳುನಾಡು ರಾಜ್ಯವನ್ನು ಡ್ರಗ್ಸ್ ಮುಕ್ತ ಮಾಡುತ್ತೇನೆ. ಜನರ ಒಂದು ಪೈಸೆಯನ್ನೂ ಮುಟ್ಟುವುದಿಲ್ಲ. ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸ್ವಲ್ಪ ಸಮಯ ನೀಡಿ ಎಂದು ಜನರಲ್ಲಿ ನೂತನ ಮುಖ್ಯ ಮಂತ್ರಿ ವಿಜಯ್ ಮನವಿ ಮಾಡಿದರು.