ಕುಡಿದ ಮತ್ತಲ್ಲಿ ಹೆದ್ದಾರಿಲಿ ಮಲಗಿ ಪ್ರೇಯಸಿಯೊಂದಿಗೆ ಮಾತನಾಡಿದ ಭೂಪ!

ಹಾಸನ: ಕುಡಿದ ಮತ್ತಿನಲ್ಲಿ ಏನೇನೋ ಮಾಡ್ತಾರಂತೆ,ಆದರೆ ಇಲ್ಲೊಬ್ಬ
ಹೆದ್ದಾರಿಯನ್ನೇ ಮಂಚ ಅಂದುಕೊಂಡು ಮಧ್ಯೆ ಮಲಗಿ ಪ್ರೇಯಸಿಗೆ ಫೋನ್ ಮಾಡಿದ ವಿಲಕ್ಷಣ ಪ್ರಸಂಗ ಹಾಸನ ಜಿಲ್ಲೆ ಆಲೂರು ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಭೈರಾಪುರ ಟೋಲ್ ಸಮೀಪ, ಬೆಂಗಳೂರು-ಮಂಗಳೂರು ಹೆದ್ದಾರಿ ಮದ್ಯದಲ್ಲಿ ಕುಡಿದು ಚಿತ್ ಆದ ಯುವಕ ಕಾಲಮೇಲೆ ಕಾಲು ಹಾಕಿ ಮಲಗಿ ಪ್ರೇಯಸಿಗೆ ಕಾಲ್ ಮಾಡಿದ್ದಾನೆ.

ಮದ್ಯಪಾನ ಮಾಡಿ, ಬೈಕ್‌ನ್ನು ರಸ್ತೆ ಮಧ್ಯೆ ನಿಲ್ಲಿಸಿ, ಕಾಲಿನ ಮೇಲೆ ಕಾಲು ಹಾಕಿಕೊಂಡು ಹೆದ್ದಾರಿ ಮಧ್ಯದಲ್ಲೇ ಮಲಗಿದ್ದಾನೆ.ಜತೆಗೆ ಪ್ರೇಯಸಿಯೊಂದಿಗೂ ಮೊಬೈಲ್‌ನಲ್ಲಿ ಮಾತನಾಡಿದ್ದಾನೆ.

ಅದೇ ಸಮಯದಲ್ಲಿ ಹಾದೂ ಹೋಗುವ ಇತರೆ ವಾಹನ ಸವಾರರು ಈ ದೃಶ್ಯವನ್ನು ಕಂಡು ಹೌಹಾರಿದ್ದಾರೆ.

ಯುವಕನ ಅಜಾಗರೂಕ ವರ್ತನೆಯಿಂದ ಕೆಲಕಾಲ ವಾಹನಸವಾರರಿಗೆ ಬಹಳ ಕಿರಿ,ಕಿರಿಯಾಯಿತು.

ರಸ್ತೆ ಮಧ್ಯೆಯೇ ಬೈಕ್ ಅಡಲಾಗಿ ನಿಲ್ಲಿಸಿದ್ದಲ್ಲದೆ ಯುವಕ ತಾನೂ ಅಲ್ಲೇ ಮಲಗಿ ಮಜಾ ತಗೊಂಡಿದ್ದಾನೆ.
.
ಇದರಿಂದಾಗಿ ವೇಗವಾಗಿ ಸಂಚರಿಸುತ್ತಿದ್ದ ವಾಹನಗಳಿಗೆ ಭಾರೀ ಅಪಾಯವಾಗವ ಸಧ್ಯತೆ ಇತ್ತು,ಅದೃಷ್ಟವಶಾತ್ ಏನೂ ತೊಂದರೆಯಾಗಿಲ್ಲ.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸ್ಥಳೀಯರು ತಕ್ಷಣ ದಾವಿಸಿ ಯುವಕನಿಗೆ ಬುದ್ದಿ ಹೇಳಿ, ಸ್ಥಳದಿಂದ ಆಕಡೆಗೆ ಕಳಿಸಿದ್ದಾರೆ. ಹಾಗಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ.