ಬೆಂಗಳೂರು: ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ಕೊಟ್ಟಿದೆ. ಶೇ.12.50 ರಷ್ಟು ವೇತನ ಪರಿಷ್ಕರಿಸಲಾಗಿದ್ದು, ಹೊಸ ವೇತನವು ಜು.1ರ ವೇತನದಲ್ಲೇ ಪಾವತಿಯಾಗಲಿದೆ.
2025 ಮಾರ್ಚ್ 31ರ ಮೂಲ ವೇತನದ ಮೇಲೆ ಶೇ.12.50 ರಷ್ಟು ವೇತನ ಹೆಚ್ಚಳ ಮಾಡಲಾಗಿದೆ. ಸಾರಿಗೆ ನೌಕರರು ಹಲವು ವರ್ಷಗಳಿಂದ ವೇತನ ಪರಿಷ್ಕರಣೆಗೆ ಬೇಡಿಕೆ ಇಟ್ಟಿದ್ದರು. ಈಗ ಸರ್ಕಾರ ನೌಕರರಿಗೆ ಸಿಹಿ ಸುದ್ದಿ ಕೊಟ್ಟಿದೆ.
ಶೇ.25 ರಷ್ಟು ವೇತನ ಪರಿಷ್ಕರಣೆಗೆ ಸಾರಿಗೆ ಸಂಘಟನೆಗಳು ಒತ್ತಾಯಿಸಿದ್ದವು. ವೇತನ ಪರಿಷ್ಕರಣೆ ಮಾಡದಿದ್ದರೆ ಮುಷ್ಕರ ಮಾಡಲು ನಿರ್ಧರಿಸಿದ್ದವು. ಸದ್ಯ ಸಾರಿಗೆ ಇಲಾಖೆ ಶೇ.12.5 ರಷ್ಟು ವೇತನ ಪರಿಷ್ಕರಿಸಿದೆ. ಆದರೆ, ಇದಕ್ಕೆ ಸಾರಿಗೆ ನೌಕರರ ಸಂಘಟನೆಗಳು ಒಪ್ಪಿಗೆ ಸೂಚಿಸಿಲ್ಲ ಹಾಗಾಗಿ ಮುಂದೇನಾಗಲಿದೆ ಕಾದು ನೋಡಬೇಕಿದೆ.

