ಮಂಡ್ಯ: ಜಿಲ್ಲೆಯ ಮಳವಳ್ಳಿ ಗ್ರಾಮಾಂತರ ಠಾಣೆ ಎಎಸ್ ಐ ಶಿವಕುಮಾರ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಗಲಾಟೆ ಸಂಬಂಧ ರಾಜೇಗೌಡ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಎ ಎಸ್ ಐ ಶಿವಕುಮಾರ್ ಸ್ಟೇಷನ್ ಬೇಲ್ ನೀಡಲು 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಠಾಣೆಯಲ್ಲೇ ಜಾಮೀನು ನೀಡಿ, ಪ್ರಕರಣ ಇತ್ಯರ್ಥಗೊಳಿಸುವ ಆಮಿಷ ನೀಡಿದ್ದರು.
ಈ ಕುರಿತು ದೂರುದಾರ ರೆಕಾರ್ಡ್ ಮಾಡಿ ಲೋಕಾಯುಕ್ತರಿಗೆ ನೀಡಿದ್ದರು.ಎ ಎಸ್ ಐ
ಬುಧವಾರ ರಾತ್ರಿ ಠಾಣೆಯಲ್ಲೇ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಇನ್ಸ್ ಪೆಕ್ಟರ್ ಲೇಪಾಕ್ಷಮೂರ್ತಿ, ಬ್ಯಾಟರಾಯಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು,ಮುಂದಿನ ಕ್ರಮ ಕೈಗೊಳ್ಳಲಾಗಿದೆ.

