ಸಚಿವರ ರಾಜೀನಾಮೆ;ಸಿಎಂ ಡಿಕೆಶಿಗೆ ಅಶೋಕ್ ಚಾಟಿ

ಬೆಂಗಳೂರು: ಮಂತ್ರಿ ಮಾಡಲಿಲ್ಲ ಅಂತ ಪ್ರಮಾಣ ವಚನ ಸಮಾರಂಭದಿಂದ ಅರ್ಧದಲ್ಲೇ ಎದ್ದು ಹೋದರು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್,ಕೊಟ್ಟ ಮಾತಿನಂತೆ ಹೇಳಿದ ಖಾತೆ ಕೊಡಲಿಲ್ಲ ಅಂತ ಬಹಿರಂಗವಾಗಿ ಸುದ್ದಿಗೋಷ್ಠಿಯಲ್ಲಿ ರಾಜೀನಾಮೆ ಕೊಟ್ಟರು ಸಚಿವ ರಾಮಲಿಂಗಾ ರೆಡ್ಡಿ.. ಹೀಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ನನ್ನ ಹಿರಿತನಕ್ಕೆ, ಸಾಮರ್ಥ್ಯಕ್ಕೆ ತಕ್ಕಂತ ಖಾತೆ ಬದಲಾವಣೆ ಮಾಡುವವವರೆಗೂ ಕೊಟ್ಟ ಖಾತೆಯ ಚಾರ್ಚ್ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ ಸಚಿವ ಕೆ.ಹೆಚ್.ಮುನಿಯಪ್ಪ.
ಇಷ್ಟಾದರೂ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿದೆ ಎಂದು ಕನ್ನಡಿಗರು ನಂಬಬೇಕಂತೆ ಎಂದು ಟ್ವೀಟ್ ಮಾಡಿ ನೂತನ ಸಿಎಂ ಡಿ ಕೆ.ಶಿವಕುಮಾರ್ ಅವರಿಗೆ ಚಾಟಿ ಬೀಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ವೋಟು ಹಾಕಿದ ತಪ್ಪಿಗೆ ಕನ್ನಡಿಗರು ಇನ್ನೂ ಏನೇನು ನೋಡಬೇಕೋ ಆ ದೇವರೇ ಬಲ್ಲ ಎಂದು ಅಶೋಕ್ ಕುಟುಕಿದ್ದಾರೆ.