ಸುದ್ದಿ ಫಲಶೃತಿ
(ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ)
ಚಾಮರಾಜನಗರ: ಸಾರ್ವಜನಿಕ ಸಮಸ್ಯೆಗಳು ಅದರ ಪರಿಹಾರ ಸಂಬಂದ ಜಿಲ್ಲಾಡಳಿತ ವತಿಯಿಂದ ನಡೆಯುತ್ತಿದ್ದ ಪೊನ್ ಇನ್ ೨೦೧೯ ರ ನಂತರ ಮಾಯವಾಗಿಧ್ದುದು ಈಗ ಮತ್ತೆ ಪ್ರಾರಂಭವಾಗಲಿದೆ.
ಈಗಿನ ಜಿಲ್ಲಾದಿಕಾರಿಗಳು ಮತ್ತೆ ಆರಂಬಿಸ್ತಾರಾ ಎಂಬುದರ ಕುರಿತು ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತಿದ್ದರ ಹಿನ್ನೆಲೆಯಲ್ಲಿ ಮಾಧ್ಯಮ ಸುದ್ದಿ ಪ್ರಕಟಿಸಿತ್ತು.
ಇದೀಗ ಬಹಳ ವರ್ಷಗಳ ನಂತರ ನಿಂತಿದ್ದ ಪೊನ್ ಇನ್ ಕಾರ್ಯಕ್ರಮವನ್ನ ಜಿಲ್ಲಾದಿಕಾರಿ ಶ್ರೀರೂಪ ಅವರು ಆರಂಬಿಸಲು ನಿರ್ದರಿಸಿದ್ದಾರೆ.
ಜಿಲ್ಲಾದಿಕಾರಿ ಹರ್ಷಗುಪ್ತ ಅವರು ಆರಂಬಿಸಿದ ನೇರ ಪೊನ್ ಗೆ ಉತ್ತಮ ಬೆಂಬಲ ಸಾರ್ವಜನಿಕರಲ್ಲಿ ಸಿಕ್ಕಿತ್ತು.
ದೂರುದಾರರ ಪ್ರಶ್ನೆಗಳಿಗೆ ನೇರವಾಗಿ ಅದಿಕಾರಿಗಳಿಂದಲೆ ಉತ್ತರ ನೀಡಿಸುವ ಪ್ರಕ್ರಿಯೆ ನಡೆಯುತ್ತಿತ್ತು.
ರಾಜ್ಯಾದಾದ್ಯಂತ ಬಹುತೇಕ ಕೆಲ ಇಲಾಖೆಗಳು ನೇರ ಪೊನ್ ಇನ್ ಆರಂಬಿಸಿ ಯಶಸ್ವಿಯಾಗಿ ನಡೆಸುತ್ತಿವೆ, ಮತ್ತೆ ಕೆಲವು ಜಿಲ್ಲೆಗಳ ಪೊಲಿಸ್ ವರೀಷ್ಟಾದಿಕಾರಿಗಳು ತಮ್ಮದೆ ಕಚೇರಿಯಲ್ಲಿ ಪೊನ್ ಇನ್ ಆರಂಬಿಸಿದ್ದಾರೆ. ಆದರೆ ಗಡಿಜಿಲ್ಲೆಯಲ್ಲಿ ಮಾತ್ರ ಹಿಂದೆ ಇದ್ದ ಜಿಲ್ಲಾಡಳಿತ ಪೊನ್ ಇನ್ ಗೆ ತಿಲಾಂಜಲಿ ಹೇಳಿತ್ತು.
೨೦೧೯ ರ 21 ಡಿಸೆಂಬರ ಮಾಹೆಯಲ್ಲಿ 33 ದೂರುಗಳನ್ನ ಸ್ವೀಕರಿಸಿದ ಅಂದಿನ ಜಿಲ್ಲಾದಿಕಾರಿ ಬಿ.ಬಿ ಕಾವೇರಿಯವರ ನೇತೃತ್ವದಲ್ಲಿ ನಡೆದ ನೇರ ಪೊನ್ ಇನ್ ಗೆ ಅವರ ವರ್ಗಾವಣೆಯ ನಂತರ ತಿಲಾಂಜಲಿ ಬಿಡಲಾಯಿತು.
ಪೊನ್ ಇನ್ ಗೂ ಕೊರೊನ ಅಡ್ಡಗಾಲು: ಬಿ.ಬಿ ಕಾವೇರಿ ನಂತರ ಜಿಲ್ಲಾದಿಕಾರಿ ರವಿ ಅವರು ಬಂದರು, ಅವರಿಗೆ ಕೊವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟಲು ಹರಸಾಹಸ ಮಾಡುತ್ತಿದ್ದರು ಹಾಗಾಗಿ ನಿರ್ವಹಣೆ ಮಾಡಲು ಸಮಯವೇ ಸಾಕಾಗುತ್ತಿರಲಿಲ್ಲ.
ಜತೆಗೆ ಕೊವೆಡ್ ನಿಯಮದಂತೆ ಗುಂಪು ಗೂಡುವುದು ಸಾಧ್ಯವಿಲ್ಲದ ಕಾರಣ ಪೊನ್ ಇನ್ ನಡೆ ಅಸಾದ್ಯವಾಗಿತ್ತು. ನಂತರ ಇಳಿಮುಖವಾಗಿ ಯಥಾಸ್ಥಿತಿ ಬಂದಾಗ ನಿವಾಸಿ ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಅವರು ಜಿಲ್ಲಾದಿಕಾರಿ ಕಚೇರಿಗೆ ಪತ್ರ ಸಲ್ಲಿಸಿ ಇದನ್ನ ಮುಂದುವರೆಸಲು ಮನವಿ ಮಾಡಿಕೊಂಡಿದ್ದರು.
ಜಿಲ್ಲಾದಿಕಾರಿ ಶಿಲ್ಪನಾಗ್ ಅವರು ಎರಡೂವರೆ ವರ್ಷಗಳ ಕಾಲ ಆಡಳಿತ ನಡೆಸಿದರಾದರೂ ಅವರೂ ಕೂಡಾ ಪೊನ್ ಇನ್ ಕಾರ್ಯಕ್ರಮ ಚಾಲನೆ ನೀಡಲೆ ಇಲ್ಲ.
ಇದೀಗ ನೂತನವಾಗಿ ಬಂದಿರುವ ಜಿಲ್ಲಾದಿಕಾರಿ ಶ್ರೀರೂಪ ಅವರು ಜಿಲ್ಲಾಡಳಿತದಿಂದ ನೇರ ಪೊನ್ ಇನ್ ಕಾರ್ಯಕ್ರಮ ಮಾಡುವಂತೆ ಸಾರ್ವಜನಿಕರ ಒತ್ತಾಸೆಯಾಗಿದೆ.
ಸಾರ್ವಜನಿಕ ಸಮಸ್ಯೆ ಹಾಗೂ ಪಾರದರ್ಶಕವಾಗಿ ಅದಿಕಾರಿಗಳು ಸ್ಪಂದಿಸಿ ಕ್ರಿಯಾಶೀಲ ಆಡಳಿತಕ್ಕೆ ಸಹಕಾರಿಯಾಗುವಂತೆ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಮಾಧ್ಯಮ ಪ್ರಕಟಿಸಿತ್ತು.
ಅಂತೂ ಇಂತೂ ಜಿಲ್ಲಾಡಳಿತ ಇದೀಗ ಪತ್ರಕಾ ಪ್ರಕಟಣೆ ಹೊರಡಿಸಿದೆ.
ಚಾಮರಾಜನಗರ: ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜೂನ್ 23ರಂದು ಬೆಳಿಗ್ಗೆ 11 ರಿಂದ 12 ಗಂಟೆಯವರೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಾರ್ವಜನಿಕರು ಬೆಳಿಗ್ಗೆ 11 ರಿಂದ 12 ಗಂಟೆಯವರೆಗೆ ದೂರವಾಣಿ ಸಂಖ್ಯೆ 08226-2231637 6 ಕುಂದು ಕೊರತೆಗಳನ್ನು ತಿಳಿಸಿ ಪರಿಹರಿ-ಸಿಕೊಳ್ಳುವಂತೆ ಜಿಲ್ಲಾಧಿಕಾರಿ ಶ್ರೀರೂಪಾ ತಿಳಿಸಿದ್ದಾರೆ.

