ಶಾಸಕರ ಪತ್ನಿಗೂ ಅಶ್ಲೀಲ ಕಾಮೆಂಟ್! ದೂರು ದಾಖಲು

ಮೈಸೂರು ಜುಲೈ,1: ನಟಿಯರು, ಸೆಲೆಬ್ರಿಟಿಗಳಿಗೆ ಕಿಡಿಗೇಡಿಗಳು ಕೆಟ್ಟ,ಕೆಟ್ಟ,ಕಾಮೆಂಟ್ ಕಳಿಸಿದ್ದಾಯ್ತು,ಈಗ ರಾಜಕಾರಣಿಗಳ ಪತ್ನಿಯರ ಸರದಿ.

ಹೌದು ಇದು ನಿಜ.ರಾಜಕಾರಣಿಗಳ ಪತ್ನಿಗೂ ಕಾಮೆಂಟ್ ಕಾಟ ಶುರುವಾಗಿದೆ.
ವಿಕೃತ ಮನಸ್ಸಿನ ಯಾರೊ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ್ದಾರೆ.

ಶಾಸಕ ಜಿ.ಟಿ.ಡಿ ಪುತ್ರ ಹಾಗೂ
ಶಾಸಕರಾದ ಜಿ.ಡಿ. ಹರೀಶ್ ಗೌಡ ಅವರ ಪತ್ನಿ ವರ್ಷಾ ಹರೀಶ್ ಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಾಮೆಂಟ್ ಮಾಡಲಾಗಿದೆ.

dkgowda8456 ಹೆಸರಿನ ಖಾತೆಯಿಂದ ವರ್ಷಾ ಅವರ ಕುರಿತು ಅಶ್ಲೀಲ ಕಾಮೆಂಟ್ ಪೋಸ್ಟ್ ಮಾಡಲಾಗಿದೆ.

ಈ ಸಂಬಂಧ ವರ್ಷಾ ಹರೀಶ್ ಗೌಡ ಅವರು ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಶ್ಲೀಲ ಕಾಮೆಂಟ್ ಮಾಡುವವರಿಗೆ ಕಡಿವಾಣ ಹಾಕಿ, ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಭಾರತ ದೇಶದಲ್ಲಿ ಮಹಿಳೆಯರನ್ನು ಪೂಜನೀಯವಾಗಿ ನೋಡುತ್ತಾರೆ. ಆದರೆ ಕೆಲವು ಕಿಡಿಗೇಡಿಗಳು ಇಂತಹ ಹೀನ ಕೆಲಸ ಮಾಡುತ್ತಾರೆ.

ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ ಅಗತ್ಯ ಕ್ರಮ ಕೈಗೊಂಡು ಕೆಟ್ಟ ಕಾಮೆಂಟ್ ಮಾಡುವವರಿಗೆ ಎಚ್ಚರಿಕೆ ಪಾಠ ಕಲಿಸುವಂತೆ
ವರ್ಷಾ ಅವರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.