ಮಿನಿ‌ ವಿಧಾನ ಸೌಧದ ಬಳಿ ಹಗಲಲ್ಲೇ ಕಳ್ಳರು ಸ್ಕೂಟಿಯಲ್ಲಿದ್ದ 50 ಸಾವಿರ‌ ಎಗರಿಸಿದರು!

ನಂಜನಗೂಡು: ಹಾಡಹಗಲೇ ಮೂವರು ಖದೀಮರು ರಾಜಾರೋಶವಾಗಿ ಸಾರ್ವಜನಿಕ ಜನಿಕ ಸ್ಥಳದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ 50 ರೂ ಎಗರಿಸಿದ‌ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ಈ ಘಟನೆ ನಂಜನಗೂಡಿನ ಮಿನಿ ವಿಧಾನಸೌಧದ ಬಳಿ ನಡೆದಿದೆ.ಹೊಸ್ಕೂರು ಗ್ರಾಮದ ಚಂದ್ರು ಎಂಬುವರಿಗೆ ಸೇರಿದ ಸ್ಕೂಟಿ.

ಮೂವರು ಸ್ಕೂಟಿಯ ಸೀಟನ್ನು ಬಲವಂತವಾಗಿ ಎಳೆದು ಢಿಕ್ಕಿಯಲ್ಲಿದ್ದ ಹಣವನ್ನ ಎಗರಿಸಿದ್ದಾರೆ.ಇವರ ಈ ಕಳ್ಳತನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಎಸ್.ಬಿ.ಎಂ.ಬ್ಯಾಂಕ್ ನಿಂದ ಚಂದ್ರು ಸವರು 3.5 ಲಕ್ಷ ಡ್ರಾ ಮಾಡಿ ಸ್ಕೂಟಿಯಲ್ಲಿ ಇಟ್ಟಿದ್ದಾರೆ.ಪತ್ರ ಬರಹಗಾರ ನಾಗರಾಜು ಅವರ ಕಚೇರಿಗೆ ತೆರಳಿದ ಚಂದ್ರು 3 ಲಕ್ಷ ತೆಗೆದುಕೊಂಡು ಉಳಿದ 50 ಸಾವಿರ ಸ್ಕೂಟಿಯ ಢಿಕ್ಕಿಯಲ್ಲಿ ಇಟ್ಟಿದ್ದಾರೆ.

ಇದೆಲ್ಲವನ್ನೂ ಗಮನಿಸಿದ್ದ ಕಳ್ಳರು ಹೊಂಚು ಹಾಕಿ ಸೀಟನ್ನ ಬಲವಂತವಾಗಿ ತೆಗೆದು ಹಣ ಎಗರಿಸಿದ್ದಾರೆ.ಹಣ ತೆಗೆಯುವಾಗ ಅಕ್ಕ,ಪಕ್ಕ ಜನ ಕಾಣುತ್ತಾರೆ.ಆದರೂ ಲೆಕ್ಕಿಸದೆ ಒಮ್ಮೆ ಸುತ್ತ ಕಣ್ಣಾಡಿಸಿ ಹಣ ದೋಚಿ ಆರಾಮಾಗೆ‌ ಹೋಗಿದ್ದಾರೆ.

ಇಂತಹ ನೀಚರಿಗೆ ತಕ್ಕ‌ಶಸ್ತಿ ಆಗಲೇಬೇಕಿದೆ.
ನಂಜನಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಕಳ್ಳರ ಪತ್ತೆಗೆ‌ ಬಲೆ ಬೀಸಲಾಗಿದೆ.

ಈ‌ ಕೃತ್ಯ‌ ಹಗಲಲ್ಲೇ‌ ಕಚೇರಿ‌ ಸಮಯದಲ್ಲೇ,ಅದೂ ಮಿನಿ ವಿಧಾನ ಸೌಧದ ಬಳಿಯೇ ನಡೆದಿದೆ,ಸೆಕ್ಯುರಿಟಿ ಇರಲಿಲ್ಲವೆ ಎಂದು ಜನರು‌ ಪ್ರಶ್ನಿಸಿದ್ದರೆ.