ರೇಣುಕಾಸ್ವಾಮಿ ಕೊಲೆ: ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಆದೇಶ ಆ.24ಕ್ಕೆ ಮುಂದೂಡಿಕೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಆದೇಶವನ್ನು 59ನೇ ಸೆಷನ್ಸ್ ಕೋರ್ಟ್ ಆ.24ಕ್ಕೆ ಮುಂದೂಡಿದೆ.

ಜೈಲಿನಲ್ಲಿರುವ ವೇಳೆ ಪ್ರದೋಷ್ ನಡವಳಿಕೆಯ ಬಗ್ಗೆ ವರದಿ ನೀಡುವಂತೆಯೂ ಕೋರ್ಟ್ ಕೇಳಿತ್ತು.

ಪ್ರದೂಷ್ ಅಪರಾಧಿಕ ಹಿನ್ನಲೆ ಬಗ್ಗೆ ಕೋರ್ಟ್‌ಗೆ ಕಾಮಾಕ್ಷಿಪಾಳ್ಯ ಪೊಲೀಸರು ವರದಿ ಸಲ್ಲಿಸಿದ್ದರು. ಪ್ರದೋಷ್ ಮೇಲೆ ಈ ಕೇಸ್ ಬಿಟ್ಟು ಬೇರೆ ಯಾವ ಕೇಸೂ ಇಲ್ಲ ಎಂದು ಎಸಿಪಿ ವರದಿ ಸಲ್ಲಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗ್ಯಾಂಗ್ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಿ ತನ್ನನ್ನು ಪರಿಗಣಿಸುವಂತೆ ಕೋರ್ಟ್ ಗೆ‌ ಅರ್ಜಿ ಸಲ್ಲಿಕೆ ಮಾಡಿದ್ದ, ಇದೇ ವೇಳೆ, ಮತ್ತೊಬ್ಬ ಆರೋಪಿ ವಿನಯ್ ಕೂಡ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಕೆ ಮಾಡಿದ್ದಾನೆ.

ಮುಂದೇನು ಎಂಬುದನ್ನು ಕಾದು ನೋಡಬೇಕಿದೆ.