ಅಂಬಾರಿ ಹೊರುವ ಆನೆ ಆಯ್ಕೆ ನಿರ್ಧಾರ ಅರಣ್ಯ ಇಲಾಖೆಗೆ:ರಾಮಲಿಂಗಾರೆಡ್ಡಿ

ಮೈಸೂರು: ಅಂಬಾರಿ ಹೊರುವ ಆನೆಯ ಆಯ್ಕೆಯ ನಿರ್ಧಾರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಬಿಟ್ಟಿದ್ದೇವೆ ಎಂದು ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.

ಮೈಸೂರಿನ ಅರಮನೆ ಆವರಣದಲ್ಲಿ‌ ಗಜಪಡೆ ಬರಮಾಡಿಕೊಂಡ‌ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿನಿತ್ಯ ಆನೆಗಳಿಗೆ ತಾಲೀಮು ನಡೆಸಲಾಗುತ್ತದೆ. ತಾಲೀಮಿನ ನಂತರ ಅಂತಿಮವಾಗಿ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.

ಹನೂರು ಶೂಟ್ ಔಟ್ ಪ್ರಕರಣ ಸಂಬಂಧ ತನಿಖೆ ಶುರುವಾಗಿದೆ. ಎಸಿ ವರದಿಗೂ ತನಿಖಾ ವರದಿಗೂ ಸಂಬಂಧವಿಲ್ಲ. ಇಲಾಖೆಯ ಆಸ್ತಿ ನಾಶ ಮಾಡಿದವರ ಮೇಲೂ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಧಿಕಾರಿಗಳು ಹೆದರುವ ಅವಶ್ಯಕತೆ ಇಲ್ಲ. ಅಧಿಕಾರಿಗಳು ಧೈರ್ಯವಾಗಿ ಅರಣ್ಯಕ್ಕೆ ಹೋಗಿ ಕೆಲಸ ಮಾಡಬೇಕು. ಅಧಿಕಾರಿಗಳ ರಕ್ಷಣೆಗೆ ಇಲಾಖೆ ಬದ್ಧವಾಗಿದೆ ಎಂದು ಭರವಸೆ ನೀಡಿದ ಸಚಿವ‌ ರಾಮಲಿಂಗಾರೆಡ್ಡಿ ಕಾಡು ಉಳಿದರೆ ನಾಡು ಉಳಿಯುತ್ತದೆ ಎಂದು ಹೇಳಿದರು.