ಮೈಸೂರಿನಲ್ಲಿ ಆಗಾಗ ಕೆಟ್ಟು ನಿಲ್ಲುವ ನಗರ ಸಾರಿಗೆ‌ ಬಸ್ ಗಳು!

ಮೈಸೂರು: ನಾಡ ಹಬ್ಬ ದಸಾರಾ ಸಮೀಪಿಸುತ್ತಿದೆ, ಈಗಾಗಲೇ ಸಾಂಸ್ಕತಿಕ ನಗರಿ ಮೈಸೂರಿಗೆ ಬಹಳಷ್ಟು ಜನ ಆಗಮಿಸಿದ್ದಾರೆ. ಹಾಗಾಗಿ ನಗರ ಸಾರಿಗೆ ಬಸ್ ಗಳು ಸದಾ ತುಂಬಿರುತ್ತವೆ.

ಬಹಳಷ್ಟು ಬಡಾವಣೆಗಳಲ್ಲಿ ಬಸ್ ಪ್ರಾಬ್ಲಮ್ ಇದೆ. ಜೊತೆಗೆ ಅಲ್ಲಲ್ಲೇ ಬಸ್ ಗಳು ಕೆಟ್ಟು ನಿಲ್ಲುತ್ತದೆ ಇದರಿಂದ ಪ್ರಯಾಣಿಕರಿಗೆ ಬಹಳ ತೊಂದರೆಯಾಗುತ್ತಿದೆ.

ಇದು ಒಂದು ದಿನದಲ್ಲ ಬಹಳಷ್ಟು ದಿನಗಳಿಂದ ಇದೆ ಕಥೆಯಾಗಿದೆ. ಆಯಾ ನಿಲ್ದಾಣಗಳಿಂದ ಬಸ್ ಹೊರಟರೂ ಮಾರ್ಗಮಧ್ಯೆ ಕೆಟ್ಟು ನಿಲ್ಲುತ್ತವೆ.ಆದರೆ ಇದನ್ನೆಲ್ಲ ಕೇಳೋರೇ ಇಲ್ಲದಂತಾಗಿದೆ

ದಸರಾ ರಜೆ ಬರುವುದರಿಂದ ರಾಜ್ಯ ಹಾಗೂ ದೇಶಾದ್ಯಂತ ಮೈಸೂರಿಗೆ ತುಂಬಾ ಜನ ಬರುತ್ತಾರೆ ಹಾಗಾಗಿ ಹೆಚ್ಚಿನ ಸಾರಿಗೆ ವ್ಯವಸ್ಥೆಯ ಅಗತ್ಯವಿದೆ, ಕೂಡಲೇ ಸರ್ಕಾರ ಮತ್ತು ಸಂಬಂಧ ಪಟ್ಟ ಸಚಿವರು ಇತ್ತ ಗಮನ ಹರಿಸುವ ಅತ್ಯಗತ್ಯ ವಿದೆ.

ಕಳೆದ ಹದಿನೈದು ದಿನಗಳ ಹಿಂದೆ ನಗರ ಬಸ್ ನಿಲ್ದಾಣದಿಂದ ಹೊರಟ‌‌‌ ಬಸ್ ಸಂಸ್ಕೃತ ಪಾಠಶಾಲೆ ವೃತ್ತದಲ್ಲಿ ತಿರುವು ಪಡೆದು ಹಂಡ್ರೆಡ್ ಫೀಟ್ ರೋಡ್ ಗೆ ಬಂದ ಕೂಡಲೇ ಕೆಟ್ಟು ನಿಂತಿತು.

ಅದಕ್ಕೆ ಒಂದು ವಾರ ಮೊದಲು ಬಸ್ ನಿಲ್ದಾಣದಿಂದ ಟೆರೇಶಿಯನ್ ಕಾಲೇಜು ಮಾರ್ಗವಾಗಿ ಹೊರಟ ಬಸ್ ಗೀತಾ ಸ್ಕೂಲ್ ಸ್ಟಾಪ್ ನಿಂದ ಮುಂದೆ ಬಂದು ಕೆಟ್ಟು ಹೋಯಿತು.

ಮೊನ್ನೆ ಬಸ್ ನಿಲ್ದಾಣದಿಂದ ಜೆಪಿ ನಗರ ಕಡೆ
ಹೊರಟ ಬಸ್ ಅಗ್ರಹಾರ ಸ್ಟಾಪ್ ನಲ್ಲೆ ಕೆಟ್ಟುನಿಂತಿತು.

ಇವು ಕೇವಲ ಒಂದೆರಡು ಉದಾಹರಣೆಗಳಷ್ಟೆ.ಬಹುತೇಕ ಬಸ್ಗಳು ಸರಿಯಿಲ್ಲ.ಉದಾಹರಣೆಗೆ 80 ನೆ ನಂಬರ್ ಯಾವಾಗಲೂ ಸರಿ ಇರೋದೇ ಇಲ್ಲ.ಬೇರೆ ಯಾವುದೋ‌ ರೂಟ್‌ ಬಸ್ ಇಲ್ಲಿಗೆ ಮಾಡಿ ಕೊಡುತ್ತಾರೆ.

ಇದರಲ್ಲಿ ಡ್ರೈವರ್,ಕಂಡಕ್ಟರ್ ಹಗೂ ಆಯಾ ನಿಲ್ದಾಣಗಳ ಮೇಲ್ವಿಚಾರಕರ ತಪ್ಪು ಖಂಡಿತಾ ಇಲ್ಲ.ಮೊದಲು ಗುಣಮಟ್ಟದ ಬಸ್ಗಳನ್ನು ನೀಡಬೇಕು.ಇದು ಉನ್ನತ ಅಧಿಕಾರಿಗಳು ಸಾರಿಗೆ‌ ಸಚಿವರು ಗಮನಿಸಬೇಕಾದ ಅಂಶ.