ಮೈಸೂರು: ಯುವ ದಸರಾ 2026 ಕಾರ್ಯಕ್ರಮವು ಪ್ರತಿದಿನ ಹೊಸತನ ಸಂಗೀತದ ರಸದೌತಣ ಎಂಬ ಧೇಯ್ಯವಾಕ್ಯದೊಂದಿಗೆ ಅಕ್ಟೋಬರ್ 13 ರಿಂದ ಅಕ್ಟೋಬರ್ 17 ರವರೆಗೆ ನಡೆಯಲಿದೆ.
ಐದು ದಿನಗಳ ಕಾಲ ಸಂಜೆ 5.30 ರಿಂದ ರಾತ್ರಿ 10.30 ರವರೆಗೆ ಮೈಸೂರು ರಿಂಗ್ ರೋಡ್, ಜ್ವಾಲಾಮುಖಿ ತ್ರಿಪುರಸುಂದರಿ ದೇವಸ್ಥಾನದ ಸಮೀಪ ನಡೆಯಲಿದೆ.
ಅಕ್ಟೋಬರ್ 13 ರಂದು ಖ್ಯಾತ ನೃತ್ಯ ನಿರ್ದೇಶಕ ಹಾಗೂ ನಟ ಪ್ರಭುದೇವ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಗರಾಭಿವೃದ್ಧಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಖ್ಯಾತ ಕಲಾವಿದರ ಕಾರ್ಯಕ್ರಮಗಳು ಪ್ರತಿದಿನ ರಾತ್ರಿ 7:30 ರಿಂದ 10:30 ರವರೆಗೆ ನಡೆಯಲಿದೆ.
ಅಕ್ಟೋಬರ್ 13 ರಂದು ಹೆಸರಾಂತ ಸಂಗೀತ ನಿರ್ದೇಶಕರಾದ ಅಜನೀಶ್ ಲೋಕನಾಥ್ ಹಾಗೂ ಅವರ ತಂಡದ ಗಾಯಕರಾದ ಆಬಿ.ಬಿ, ನಕಾಶ್ ಅಜೀಜ್, ವಾಸುಕಿ ವೈಭವ್, ಸಾಯಿ ವಿಘ್ನೇಶ್, ಅನನ್ಯಾ ಭಟ್, ಮಂಗಲಿ, ಜಸ್ಕರನ್ ಸಿಂಗ್, ಐಶ್ವರ್ಯ ರಂಗರಾಜನ್, ಗಾಯಕರಾದ ಸಿ.ಆರ್ ಬಾಬಿ,ಹರ್ಷಿಕಾ ದೇವನಾಥ್, ಅನಿರುದ್ದ ಶಾಸ್ತ್ರಿ, ಇಂದು ನಾಗರಾಜ್,ಶೇ಼ಷಾಂಕ್ ಶೇಷಗಿರಿ ಅವರುಗಳು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.
ಅಕ್ಟೋಬರ್ 14 ರಂದು ಭಾರತದ ಹೆಸರಾಂತ ಸಂಗೀತ ನಿರ್ದೇಶಕರು ಮತ್ತು ಗಾಯಕರಾದ ಶಂಕರ್-ಎಹಸಾನ್-ಲಾಯ್ ಅವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.
ಅಕ್ಟೋಬರ್ 15 ರಂದು ಸುಪ್ರಸಿದ್ದ ಬಹುಭಾಷ ಗಾಯಕರಾದ ಸಿಡ್ ಶ್ರೀರಾಮ್ ಅವರಿಂದ ಸಂಗೀತ ಕಾರ್ಯಕ್ರಮ.
ಅಕ್ಟೋಬರ್ 16 ರಂದು ಸ್ಯಾಂಡ್ ವುಡ್ ನೈಟ್ಸ್, ಶಿವರಾಜ್ ಕುಮಾರ್, ರಚಿತಾ ರಾಮ್, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಚಂದನ್ ಶೆಟ್ಟಿ, All ok,ಅನುರಾಧಾ ಭಟ್, ಮತ್ತು ಹೆಸರಾಂತ ಗಾಯಕರುಗಳಿಂದ ಕಾರ್ಯಕ್ರಮ.
ಅಕ್ಟೋಬರ್ 17 ರಂದು ಭಾರತದ ಪ್ರಖ್ಯಾತ ಗಾಯಕರಾದ ಜಾಸ್ಮಿನ್ ಸ್ಯಾಂಡ್ಲಾಸ್ ಅವರಿಂದ ರಸ ಸಂಜೆ ಕಾರ್ಯಕ್ರಮ
ಪ್ರತಿದಿನ ಸಂಜೆ 5:30 ರಿಂದ ರಾತ್ರಿ 7:30 ರವರೆಗೆ ಸ್ಥಳೀಯ ಹಾಗೂ ವಿವಿಧ ಭಾಗಗಳ ಆಯ್ಕೆ ಕಲಾವಿದರಿಂದ ಫಿಲ್ಲರ್ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ.

