ಮೈಸೂರಲ್ಲಿ ಹಿಡಿತ ಸಾಧಿಸಲು ಸಿಎಂ ಡಿಕೆಶಿ ಮಾಸ್ಟರ್ ಪ್ಲಾನ್

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ತವರಿನಲ್ಲಿ ಹಾಲಿ ಸಿಎಂ ಡಿ.ಕೆ.ಶಿವಕುಮಾರ್ ಪಾರುಪತ್ಯ ಸಾಧಿಸಲು ಮುಂದಾಗಿದ್ದು, ದಸರಾ ಯಶಸ್ಸಿನ ನೆಪದಲ್ಲಿ ಹೊಸ ತಂತ್ರ ಹೆಣೆದಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ಯಶಸ್ಸಿಗೆಂದು ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಜಿಲ್ಲೆಗೆ 30ಕ್ಕೂ ಹೆಚ್ಚು ಸಚಿವರನ್ನು ನಿಯೋಜಿಸಿ ಸಿಎಂ ಡಿ.ಕೆ.ಶಿವಕುಮಾರ್ ಆದೇಶಿಸಿದ್ದಾರೆ.

11 ದಿನಗಳ ದಸರಾ ಮಹೋತ್ಸವಕ್ಕೆ ನಿತ್ಯ 3 ಸಚಿವರಂತೆ ಉಸ್ತುವಾರಿ ನೀಡಲಾಗಿದೆ.

ಈ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಅವರನ್ನು ಕುಗ್ಗಿಸುವ ಜೊತೆಗೆ, ಸಿದ್ದರಾಮಯ್ಯ ತವರಲ್ಲಿ ಅಪ್ಪ-ಮಗನ ಪ್ರಾಬಲ್ಯಕ್ಕೆ ಕಡಿವಾಣ ಹಾಕಿ ಮೈಸೂರು ಜಿಲ್ಲೆಯ ಮೇಲೆ ಹಿಡಿತ ಸಾಧಿಸುವುದು ಡಿಕೆಶಿ ಲೆಕ್ಕಾಚಾರ ಎನ್ನಲಾಗುತ್ತಿದೆ.

ಸಚಿವರಾದ ಡಾ.ಯತೀಂದ್ರ ಮತ್ತು ತಂಗಡಗಿ ಜೊತೆ ಸೇರಿ ಕಾರ್ಯಕ್ರಮ ನೋಡಿಕೊಳ್ಳುವಂತೆ ಸಿಎಂ ಸೂಚಿಸಿದ್ದಾರೆ.

ದಿನವಾರು ಉಸ್ತುವಾರಿ ಸಚಿವರ ಪಟ್ಟಿ:

ಅ.11 (ಉದ್ಘಾಟನೆ ದಿನ):ಕೆ.ಜೆ.ಜಾರ್ಜ್, ಎಸ್.ಎಸ್.ಮಲ್ಲಿಕಾರ್ಜುನ್ – ದೀಪಾಲಂಕಾರ ಮತ್ತು ಫಲಪುಷ್ಪ ಪ್ರದರ್ಶನದ ಉಸ್ತುವಾರಿ.
ಅ.12:ಕೆ.ಎಚ್.ಮುನಿಯಪ್ಪ, ಯು.ಟಿ.ಖಾದರ್, ಟಿ.ರಘುಮೂರ್ತಿ
ಅ.13: ಕೆ.ಜೆ.ಜಾರ್ಜ್, ಎನ್.ಚಲುವರಾಯಸ್ವಾಮಿ, ಸಿ.ಪುಟ್ಟರಂಗಶೆಟ್ಟಿ
ಅ.14:ಎಂ.ಬಿ.ಪಾಟೀಲ್, ಬೋಸರಾಜು, ಬೈರತಿ ಸುರೇಶ್
ಅ.15: ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಎಚ್.ಸಿ.ಬಾಲಕೃಷ್ಣ
ಅ.16:ರಾಮಲಿಂಗಾರೆಡ್ಡಿ, ಬಸವರಾಜ ರಾಯರೆಡ್ಡಿ, ಶಿವಲಿಂಗೇಗೌಡ
ಅ.17:ಎಸ್.ಎಸ್.ಮಲ್ಲಿಕಾರ್ಜುನ್, ನರೇಂದ್ರಸ್ವಾಮಿ, ಅಜಯ್ ಸಿಂಗ್
ಅ.18:ಕೃಷ್ಣ ಬೈರೇಗೌಡ, ಮಧು ಬಂಗಾರಪ್ಪ, ರುದ್ರಪ್ಪ ಲಮಾಣಿ
ಅ.19:ಪ್ರಿಯಾಂಕ್ ಖರ್ಗೆ, ರಿಜ್ವಾನ್ ಅರ್ಷದ್, ಲಕ್ಷ್ಮಣ ಸವದಿ
ಅ.20:ಶರಣಪ್ರಕಾಶ್ ಪಾಟೀಲ್, ಜಮೀರ್ ಅಹಮದ್, ಸಂತೋಷ್ ಲಾಡ್
ಅ.21 (ವಿಜಯದಶಮಿ – ಜಂಬೂಸವಾರಿ):ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಇಡೀ ಸಚಿವ ಸಂಪುಟ ಮತ್ತು ಶಾಸಕರು ಭಾಗವಹಿಸಲಿದ್ದಾರೆ.