ಹಾಸನ: ರಾಜ್ಯದಲ್ಲಿ ಸ್ಟಿಂಗ್ ಆಪರೇಶನ್ ವಿಷಯ ಅತ್ಯಂತ ಗಂಭೀರ ವಿಷಯ ಈ ಬಗ್ಗೆ ತನಿಖೆ ನಡೆಯಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದರು.
ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯ ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ದರ್ಶನ ಪಡೆದ ನಂತರ ಮಾಧ್ಯಮಗಳೊಂದುಗೆ ಮಾತನಾಡಿದ
ಅವರು; ಸಿದ್ದರಾಮಯ್ಯ ವಿಚಾರದಲ್ಲಿ ಹರಿದಾಡುತ್ತಿರುವ ಮಾಹಿತಿಯನ್ನು ಲೀಕ್ ಮಾಡಿದವರು ಯಾರು ಅದಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಕೆಲ ದಿನಗಳಿಂದ ಒಂದು ವಿಷಯ ಹರಿದಾಡ್ತಾ ಇದೆ. ಅದನ್ನು ಮತ್ತೆ ನಿಲ್ಲಿಸಿಕೊಂಡಿದ್ದಾರೆ, ಯಾರು ಅದನ್ನು ಮಾಡಿದ್ದು, ಅದನ್ನು ಯಾರು ಸ್ಟಿಂಗ್ ಮಾಡಿದ್ದು, ಇದೆಲ್ಲಾ ಹುಡುಗಾಟಿಕೆನಾ,
ಇದನ್ನು ಹುಡುಗಾಟಿಕೆ ರಾಜಕಾರಣ ಮಾಡಿಕೊಂಡಿದ್ದೀರಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯನವರು ಎಂಟು ವರ್ಷ ಮುಖ್ಯಮಂತ್ರಿ ಆಗಿದ್ದರು. ದೇವರಾಜ ಅರಸು ಅವರ ದಾಖಲೆ ಮೀರಿಸಿ ಆಡಳಿತ ನಡೆಸಿದವರು. ಜನಸಾಮಾನ್ಯರ ಕೆಲಸ ಮಾಡಿ, ಅವರದೇ ಆದ ಹೆಸರು ಗಳಿಸಿದವರು. ತಮ್ಮದೇ ಆದಂತಹ ವರ್ಚಸ್ಸು ಹೊಂದಿರುವ ವ್ಯಕ್ತಿಯ ಮಾನಹರಣ ಮಾಡುವ ಕೆಲಸ ಯಾಕೆ ಮಾಡಿದಿರಿ ಎಂದು ಹೆಚ್ ಡಿ ಕೆ ಪ್ರಶ್ನಿಸಿದರು.
ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಮಾಡಿದವನು ಯಾರು, ಯಾರು ಅವನು, ಅವನ ವೃತ್ತಿ ಏನು, ಇವತ್ತಿನವರೆಗೂ ಅವನ ವಿರುಧ್ಧ ಏನು ಕ್ರಮ ಕೈಗೊಂಡಿದ್ದೀರಿ ಮೀಡಿಯಾ ಮುಸುಕು ಹಾಕಿಕೊಂಡಿರುವ ಅವನ ಹಿಂದೆ ಯಾರಿದ್ದಾರೆ ಅಂಥವನಿಗೆ ರಕ್ಷಣೆ ಕೊಡುತ್ತಿರುವವರು ಯಾರು,ಇದೆಲ್ಲಾ ಯಾವ ಉದ್ದೇಶಕ್ಕೆ, ಏನಕ್ಕಾಗಿ ಮಾಡುತ್ತಿದ್ದೀರಿ ಆ ವಿಡಿಯೋವನ್ನು ಹೊರಗಡೆ ಬಿಟ್ಟವರು ಯಾರು, ಇಂತಹ ಕೆಟ್ಟ ಪರಿಸ್ಥಿತಿ ಕರ್ನಾಟಕದಲ್ಲಿ ಬರುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಕಾಂಗ್ರೆಸ್ ಪಕ್ಷ ಸರಿಪಡಿಸಿಕೊಳ್ಳಬೇಕು, ನಾವಲ್ಲ ಎಂದು ಕೇಂದ್ರ ಸಚಿವರು ತಿಳಿಸಿದರು.
ರಾಜ್ಯದಲ್ಲಿ ಸೃಷ್ಟಿ ಆಗಿರುವುದು ಅತ್ಯಂತ ಕೆಟ್ಟ ವಾತಾವರಣ. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್, ಕಾಂಗ್ರೆಸ್ ಪಕ್ಷವೇ ಕಾರಣ. ವಿಧಾನಸಭೆಯ ಅಧಿವೇಶನದಲ್ಲಿ ಒಬ್ಬ ಮುಖ್ಯಮಂತ್ರಿ ಉತ್ತರ ಕರ್ನಾಟಕ, ಕರಾವಳಿ ಭಾಗದ ಶಾಸಕರುಗಳು ಬೆಂಗಳೂರಿಗೆ ಬಂದು ಎರಡನೇ ಮದುವೆ ಆಗುತ್ತಾರೆ. ಆಮೇಲೆ ಅವರು ತಮ್ಮ ಊರುಗಳಿಗೆ ವಾಪಸ್ಸು ಹೋಗುವುದೇ ಇಲ್ಲ. ಅದರ ವಿವರ ನನ್ನ ಬಳಿ ಇದೆ ಎಂದು ಮಾಡಿಕೊಂಡು ಊರಿಗೇ ಹೋಗಲ್ಲ ಎಂದು ಒಬ್ಬ ಮುಖ್ಯಮಂತ್ರಿ ಹೇಳುತ್ತಾರೆ ಎಂದರೆ ಅದನ್ನು ಸಹಿಸಿಕೊಂಡು ಕಾಂಗ್ರೆಸ್ ನವರು ಇದ್ದಾರೆ ಎಂದರೆ ಅವರ ಪರಿಸ್ಥಿತಿ ಎಲ್ಲಿಗೆ ತಂದು ನಿಲ್ಲಿಸಿಕೊಂಡಿದ್ದಾರೆ ಎಂಬುದು ಅರ್ಥವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೆನ್ ಡ್ರೈವ್ ಪ್ರದರ್ಶಿಸಿದ ಮಂಡ್ಯ ಶಾಸಕರ ಬಗ್ಗೆ ವ್ಯಂಗ್ಯವಾಡಿದ ಸಚಿವ ಕುಮಾರಸ್ವಾಮಿ ಅವರು; ನಾನು ತೋರಿಸಿದ ಪೆನ್ ಡ್ರೈವ್ ಬೇರೆ. ಅವರೇನೋ ನನ್ನ ಸ್ಟೈಲ್ ಮಾಡೋದಕ್ಕೆ ಹೋಗಿದ್ದಾರೆ. ಅವರು ನನ್ನ ಸ್ಟೈಲ್ ಮಾಡೋದಕ್ಕೆ ಆಗೋದಿಲ್ಲ, ಒಂದು ವಾರ ಅಲ್ಲ ಒಂದು ವರ್ಷ ಆದರೂ ಬಿಡ್ತಾರಾ ನೋಡೋಣ ಬನ್ನಿ ಎಂದು ಟಾಂಗ್ ಗಾಣಿಗ ರವಿ ಹೆಸರು ಹೇಳದೆಟಾಂಗ್ ನೀಡಿದರು.
ಅಂದು ನಾನು ತೋರಿಸಿದ ಪೆನ್ ಡ್ರೈವ್ ಅಂದಿನ ನೀರಾವರಿ ಇಲಾಖೆಯಲ್ಲಿ ಆಗಿರುವ ವರ್ಗಾವಣೆ ಅಕ್ರಮದ ಬಗ್ಗೆ. ಇವತ್ತಿನ ಮುಖ್ಯಮಂತ್ರಿಗೆ ಸಂಬಂಧಿಸಿದ ವರ್ಗಾವಣೆ ವಿಷಯ ಇದು. ಈ ಮಹಾನುಭಾವರು ನೀರಾವರಿ ಮಂತ್ರಿ ಆಗಿದ್ದಾಗ ನಡೆದಿದ್ದ ವಿಷಯ ಅದು. ಎಂಜಿನಿಯರ್ ಗಳ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದ್ದು. ಬೇಕಾದರೆ ಈಗಲೂ ಕೊಡುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನೈಸ್ ಕಂಪನಿ ನಡೆಸಿರುವ ಅಕ್ರಮಗಳ ವಿರುದ್ಧ ನನ್ನ ಹೋರಾಟ ನಿಲ್ಲುವುದಿಲ್ಲ, ನಾನು ಬಿಡುಗಡೆ ಮಾಡಿರುವ ದಾಖಲೆಗಳಿಗೆ ಒಂದಕ್ಕೂ ಇವರು ಉತ್ತರ ಕೊಟ್ಟಿಲ್ಲ. ನೈಸ್ ವಿಷಯದಲ್ಲಿ ಕೋರ್ಟ್ ಆದೇಶ ಕೊಟ್ಟಿದ್ದಾರೆ. ಆ ಆದೇಶದ ಹಿನ್ನೆಲೆಯಲ್ಲಿ ಹೇಳಿದ್ದೇನೆ, ಇಲ್ಲದೇ ಇದ್ರೆ ಆ ನೈಸ್ ವಿಷಯ ತರ್ತಾನೆ ಇರಲಿಲ್ಲ. ಕೋರ್ಟ್ ನಲ್ಲಿ ಬಂದ ಆದೇಶಗಳು ಯಾವ ರೀತಿ ಉಲ್ಲಂಘನೆಯಾಗಿವೆ. ಆ ಫ್ರೇಮ್ ವರ್ಕ್ ಅಗ್ರಿಮೆಂಟ್ ಉಲ್ಲಂಘನೆಯಾಗುವುದಕ್ಕೆ ಕಾರಣ ಯಾರಿದ್ದಾರೆ, ಅದರ ಎಲ್ಲಾ ಮಾಹಿತಿಯನ್ನು ನೀಡಿದ್ದೇನೆ. ಈ ಕ್ಷಣದವರೆಗೂ ಸಿಎಂ ಆಗಲಿ, ಕಂಪನಿ ಆಗಲಿ ಯಾರೂ ಅದಕ್ಕೆ ಉತ್ತರ ಕೊಡಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಹಾಸನ ಜಿಲ್ಲಾಧಿಕಾರಿ ಹುದ್ದೆಯಲಿರುವ ಮಹಿಳೆಯ ಕೆಪಿಎಸ್ಸಿಯಲ್ಲಿ ಏನೇನು ಮಾಡಿದ್ದಾರೆ ಎಂಬುದು ದಾಖಲೆ ಸಮೇತ ಸಾಬೀತಾಗಿದೆ. ಆದರೂ ಅಲ್ಲಿ ಅಕ್ರಮ ಎಸಗಿದ ಇವರನ್ನು ಇಲ್ಲಿ ಜಿಲ್ಲಾಧಿಕಾರಿ ಸ್ಥಾನದಲ್ಲಿ ಕೂರಿಸಿದ್ದಾರೆ. ಅವತ್ತೇ ಅವರನ್ನು ರಜೆಯ ಮೇಲೆ ಕಳಿಸಿ ಸಸ್ಪೆಂಡ್ ಮಾಡಬೇಕಾಗಿತ್ತು ಎಂದು ಕೇಂದ್ರ ಸಚಿವರು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.

