ಡಿಕೆಶಿ ಹಾಗೂ ಸಿದ್ದರಾಮಯ್ಯ ಮಧ್ಯೆ ಕಾಂಪಿಟೇಷನ್ ಜಾಸ್ತಿಯಾಗಿದೆ -ಕಟೀಲ್

ದಾವಣಗೆರೆ: ಡಿಕೆಶಿ ಹಾಗೂ ಸಿದ್ದರಾಮಯ್ಯನವರ ಮಧ್ಯೆ ಕಾಂಪಿಟೇಷನ್ ಜಾಸ್ತಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ನಗರದಲ್ಲಿ ಕಟೀಲ್ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಡಿಕೆಶಿಯನ್ನು ಮುಗಿಸಲು ಪ್ರತಿದಿನ ಸಿದ್ದರಾಮಯ್ಯನವರು ಬಿಜೆಪಿ ನಾಯಕರ ಬಗ್ಗೆ ಮಾಧ್ಯಮಗಳಲ್ಲಿ ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್ ನಲ್ಲಿ ಒಳ ಜಗಳ ಹೆಚ್ಚಾಗಿದೆ ಎಂದು ಕಟೀಲ್ ದೂರಿದರು.
ಕಾಂಗ್ರೆಸ್ ನಲ್ಲಿ ಡಿಕೆಶಿ ಪ್ರಭಾವ ಹೆಚ್ಚಾಗಿ ಎಲ್ಲಾ ಕಡೆ ಅವರೇ ಕಾಣುತ್ತಿರುವುದರಿಂದ ಸಿದ್ದರಾಮಯ್ಯ ಹೀಗೆಲ್ಲ ಮಾಡುತ್ತಿದ್ದಾರೆಂದು ಕಟೀಲ್ ಮಾರ್ಮಿಕವಾಗಿ ಹೇಳಿದರು.
ಸಿದ್ದರಾಮಯ್ಯನವರು ಸದಾ ಪ್ರಚಾರದಲ್ಲಿ ಇರಬೇಕೆಂದು ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಅವರು ಏನನ್ನಾದರೂ ಮಾತನಾಡದೇ ಇದ್ದರೆ ಕಾಂಗ್ರೆಸ್ ನಲ್ಲಿ ಕಳೆದುಹೋಗ್ತಾರೆ. ಸಿದ್ದರಾಮಯ್ಯಗೆ ಗೋಹತ್ಯೆ, ಆರ್ ಎಸ್ ಎಸ್ ಮೇಲೆ ಕೋಪ ಇಲ್ಲ. ಬದಲಿಗೆ ಕಾಂಗ್ರೆಸ್ ನಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಅವರು ತಮ್ಮ ಕೋಪವನ್ನು ಡಿಕೆಶಿ ಮೇಲೆ ತೋರುವ ಬದಲು ಬಿಜೆಪಿ ವಿರುದ್ಧ ಏನೇನೋ ಮಾತನಾಡುತ್ತಿದ್ದಾರೆಂದರು.