ಯುವರಾಜ್ ಆರ್.ಎಸ್.ಎಸ್. ನವನಲ್ಲ -ಮಾ.ವೆಂಕಟರಾಮು

ಮೈಸೂರು: ಯುವರಾಜ್ ಎಂಬ ವ್ಯಕ್ತಿ ಆರ್ ಎಸ್ ಎಸ್ ನವನಲ್ಲ ಎಂದು ಆರ್ ಎಸ್ ಎಸ್ ಹಿರಿಯ ಮುಖಂಡ ಮಾ. ವೆಂಕಟರಾಮು ತಿಳಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಯುವರಾಜ್ ಗೂ ಆರ್ ಎಸ್ ಎಸ್ ಗೂ ಯಾವುದೇ ಸಂಬಂಧವಿಲ್ಲ ಎಂದ ಅವರು ಯುವರಾಜ್ ತಾನೊಬ್ಬ ಆರ್ ಎಸ್ ಎಸ್ ಮುಖಂಡನೆಂದು ಹೇಳಿಕೊಂಡು ಹಲವರು ಗಣ್ಯರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನನ್ನ ಜೀವಮಾನದಲ್ಲಿ ಅವನನ್ನು ನೋಡಿಲ್ಲ ಎಂದರು.
ಆರ್ ಎಸ್ ಎಸ್ ಗೆ ಮಸಿ ಬಳಿಯುವುದಕ್ಕೆ ನಡೆದಿರುವ ಷಡ್ಯಂತ್ರ ಇದು. ಸಾರ್ವಜನಿಕರು ಇಂತಹ ಮೋಸಗಾರರಿಗೆ ಬಲಿಯಾಗಬಾರದು ಎಂದು ವೆಂಕಟರಾಮು ತಿಳಿಸಿದರು.