ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಕೇಸ್ ನಲ್ಲಿ ಮಾಜಿ ಸಚಿವ ಜೀವರಾಜ್ ಆಳ್ವರ ಮಗ ಆದಿತ್ಯಾ ಆಳ್ವರನ್ನು ಬಂಧಿಸಲಾಗಿದೆ.
ಸ್ಯಾಂಡಲ್ ವುಡ್ ಡ್ರಗ್ ದಂಧೆಯ 6ನೇ ಆರೋಪಿಯಾಗಿದ್ದ ಆದಿತ್ಯ ಆಳ್ವನನ್ನು ರಾತ್ರಿ ಸಿಸಿಬಿ ಪೆÇಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ.
ಚೆನ್ನೈನಿಂದ ಮಂಗಳವಾರ ಮುಂಜಾನೆ ಬೆಂಗಳೂರಿನ ಸಿಸಿಬಿ ಕಚೇರಿಗೆ ಆದಿತ್ಯ ಆಳ್ವನನ್ನು ಕರೆತರಲಾಗಿದೆ.
ಇನ್ಸ್‍ಪೆಕ್ಟರ್ ಪುನೀತ್ ನೇತೃತ್ವದ ತಂಡ ಆದಿತ್ಯ ಆಳ್ವನನ್ನು ಬಂಧಿಸಿದ್ದಾರೆ.
ನಾಲ್ಕು ತಿಂಗಳ ನಂತರ ಸಿಸಿಬಿ ಪೆÇಲೀಸರು ಆದಿತ್ಯ ಆಳ್ವನನ್ನು ಬಂಧಿಸಿದ್ದಾರೆ.
ಸ್ಯಾಂಡಲ್ ವುಡ್ ಡ್ರಗ್ ಕೇಸ್ ನ ಎ6 ಆರೋಪಿಯಾಗಿದ್ದ ಆದಿತ್ಯಾ ಆಳ್ವ ವಿರುದ್ಧ ಸೆ. 4ರಂದು ಎಫ್‍ಐಆರ್ ದಾಖಲಾಗಿತ್ತು. ಎಫ್‍ಐಆರ್ ದಾಖಲು ಬಳಿಕ ಆದಿತ್ಯ ಆಳ್ವ ಅವರ ಮನೆ ಮೇಲೆ ಸಿಸಿಬಿ ದಾಳಿ ನಡೆಸಲಾಗಿತ್ತು.
ಹೆಬ್ಬಾಳದ ಹೌಸ್ ಆಫ್ ಲೈಫ್ ಮೇಲೆ ದಾಳಿ ನಡೆಸಲಾಗಿತ್ತು.
ಆದಿತ್ಯ ಆಳ್ವ ಪತ್ತೆಗಾಗಿ ಲುಕ್ ಔಟ್ ನೋಟಿಸ್ ಹೊರಡಿಸಿದ್ದ ಸಿಸಿಬಿ ಪೆÇಲೀಸರು ಮುಂಬೈನಲ್ಲಿರುವ ವಿವೇಕ್ ಒಬೆರಾಯ್ ಮನೆಯಲ್ಲೂ ಸರ್ಚ್ ವಾರಂಟ್ ಪಡೆದು ಶೋಧ ನಡೆಸಿದ್ದರು.
ಮನೆಯಲ್ಲೆ ಹಲವು ಪಾರ್ಟಿಗಳನ್ನ ಆಯೋಜನೆ ಮಾಡಿದ್ದ ಆದಿತ್ಯ ಆಳ್ವ ಈ ಕೇಸ್‍ನಲ್ಲಿ ಹಲವರು ಬಂಧನಕ್ಕೊಳಗಾದ ಬಳಿಕ ನಾಪತ್ತೆಯಾಗಿದ್ದರು.
ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಬಾಮೈದುನ ಆದಿತ್ಯಾ ಆಳ್ವ.

