ಮೈಸೂರು: ಬಿಜೆಪಿ ಆಡಳಿತ ಅಧೋಗತಿಗೆ ಹೋಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಬುಧವಾರ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸಚಿವ ಸಂಪುಟ ವಿಸ್ತರಣೆ ನಂತರ ಇನ್ನೂ ಅಧೋಗತಿಗೆ ಹೋಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಈ ಸಚಿವ ಸಂಪುಟ ಪರಿಪೂರ್ಣ ಅಂತ ಹೇಳೊಕೆ ಆಗಲ್ಲ. ಇವರೆಲ್ಲರನ್ನೂ ಸೇರಿಸಿಕೊಂಡು ಸಚಿವ ಸಂಪುಟ ವಿಸ್ತರಣೆ ಮಾಡಿದರೂ ಟೇಕಾಫ್ ಆಗಲ್ಲ. ಅದು ಕೆಳಗಡೆನೇ ಇರುತ್ತದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಮುನಿರತ್ನ, ಹೆಚ್. ವಿಶ್ವನಾಥ್ ಬಗ್ಗೆ ನಾನೂ ಮಾತನಾಡಲ್ಲ ಎಂದರು.
ನಾನು ಗೋ ಮಾಂಸ ತಿಂದಿದ್ದೇನೆ ಅಂತ ಹೇಳಿಲ್ಲ. ತಿನ್ನಬೇಕು ಅಂತ ಅನ್ನಿಸಿದರೆ ತಿನ್ನುತ್ತೇನೆ ಅಂತ ಹೇಳಿದ್ದೇನೆ. ನಾನು ಇವತ್ತಿನವರೆಗೂ ಗೋ ಮಾಂಸ, ಫೆÇರ್ಕ್ ತಿಂದಿಲ್ಲ. ತಿನ್ನಬೇಕು ಅಂತ ಅನ್ನಿಸಿದರೆ ತಿಂತೀನಿ ನೀವ್ಯಾರೂ ಕೇಳೊಕೆ ಎಂದು ಪ್ರಶ್ನಿಸಿದರು.
ಶ್ಲೋಕ ಇದೆ ಅದು ನನಗೆ ಮರೆತುಹೋಗಿದೆ. ಕೊಬ್ಬಿದ ಹೋರಿ ಮಾಂಸ ತಿನ್ನಬೇಕು ಅದು ಆರೋಗ್ಯಕ್ಕೆ ಒಳ್ಳೆಯದು ಅಂತ. ಅದನ್ನು ಬರೆದವರು ಯಾರು? ನನಗೂ ಮರೆತುಹೋಗಿದೆ ಎಂದರು.
48 ದಿನ ರೈತರು ಧರಣಿ ಕುಳಿತರೂ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಪ್ರಧಾನಿ ದೇಶದ ಕ್ಷಮೆಯಾಚಿಸಬೇಕು. ಕೃಷಿ ಕಾಯ್ದೆ ಕಾನೂನನ್ನು ಕೂಡಲೇ ಹಿಂಪಡೆಯಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಆಡಳಿತ ಅಧೋಗತಿಗೆ ಹೋಗಿದೆ -ಸಿದ್ದರಾಮಯ್ಯ

